ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮೋಸ್ಟ್ ವಾಂಟೆಡ್ ಉಗ್ರ ದಾವುದ್ ಇಬ್ರಾಹಿಂ ಕೆಲ ಆಸ್ತಿಗಳನ್ನು ಹಲವು ಪ್ರಕರಣಗಳ ಅಡಿಯಲ್ಲಿ ಮುಟ್ಟುಗೋಲು ಮಾಡಲಾಗಿದೆ. ಈ ಪೈಕಿ ನಾಲ್ಕು ಆಸ್ತಿಗಳನ್ನು ಮಹಾರಾಷ್ಟ್ರ ಸರ್ಕಾರ ಹರಾಜಿಗೆ ಇಟ್ಟಿತ್ತು.
ಮಹಾರಾಷ್ಟ್ರದ ರತ್ನಗಿರಿಯಲ್ಲಿರುವ ದಾವುದ್ ಬಾಲ್ಯದ ಮನೆ, ಕೃಷಿ ಜಮೀನು ಸೇರಿದಂತೆ ನಾಲ್ಕು ಆಸ್ತಿಗಳನ್ನು ಹರಾಜಿಗೆ ಇಡಲಾಗಿತ್ತು. ಈ ಪೈಕಿ ಕೇವಲ 2 ಆಸ್ತಿಗಳು ಹರಾಜಿನಲ್ಲಿ ಮಾರಾಟವಾಗಿದೆ. ಇನ್ನೆರಡು ಯಾರಿಗೂ ಬೇಡವಾಗಿದೆ. ಮಾರಾಟವಾಗಿರುವ ಎರಡು ಆಸ್ತಿಗಳಲ್ಲಿ ಒಂದು ಆಸ್ತಿ ಕೇವಲ 3.28 ಲಕ್ಷ ರೂಪಾಯಿಗೆ ಮಾರಾಟವಾಗಿದೆ.
ರತ್ನಗಿರಿ ಜಿಲ್ಲೆಯ ಮುಂಬಾಕೆಯಲ್ಲಿರುವ ದಾವುದ್ ಇಬ್ರಾಹಿಂ ಬಾಲ್ಯದ ಮನೆ, ಕೃಷಿ ಜಮೀನುಗಳು ಸೇರಿದಂತೆ ನಾಲ್ಕು ಆಸ್ತಿಗಳನ್ನು ಮಹಾರಾಷ್ಟ್ರ ಸರ್ಕಾರ ಹರಾಜಿಗೆ ಇಡಲಾಗಿತ್ತು. ನಾಲ್ಕರ ಒಟ್ಟು ಆರಂಭಿಕ ಬೆಲೆ ಕೇವಲ 19 ಲಕ್ಷ ರೂಪಾಯಿ ನಿಗದಿಪಡಿಸಲಾಗಿತ್ತು. ಈ ಹಿಂದಿನ ಹರಾಜುಗಳಲ್ಲೂ ಕೂಡ ದಾವುದ್ ಇಬ್ರಾಹಿಂ ಆಸ್ತಿ ಖರೀದಿಸಲು ಹೆಚ್ಚಿನವರು ಹಿಂದೇಟು ಹಾಕಿದ್ದರು. ಈ ಬಾರಿಯೂ ಇದೇ ನಿರಾಸಕ್ತಿ ಎದ್ದು ಕಾಣುತ್ತಿತ್ತು. ಕೋಟಿ ಕೋಟಿ ರೂಪಾಯಿ ಮೌಲ್ಯದ ದಾವುದ್ ಇಬ್ರಾಹಿಂ ಆಸ್ತಿಗಳ ಹರಾಜು ಮೌಲ್ಯವನ್ನು ಕೇವಲ 19 ಲಕ್ಷ ರೂಪಾಯಿಗೆ ಇಳಿಕೆ ಮಾಡಲಾಗಿತ್ತು.
ನಾಲ್ಕು ಆಸ್ತಿಗಳ ಪೈಕಿ ಒಂದು ಕೃಷಿ ಜಮೀನು ಸೇರಿದಂತೆ ಮನೆ ಬಡ್ಡಿಂಗ್ 2.01 ಕೋಟಿ ರೂಪಾಯಿವರೆಗೆ ತಲುಪಿತು. ಅಂತಿಮವಾಗಿ ಒಂದು ಆಸ್ತಿ 2.01 ಕೋಟಿ ರೂಪಾಯಿಗೆ ಮಾರಾಟವಾಗಿದೆ . ಮತ್ತೊಂದು ಆಸ್ತಿ ಕೇವಲ 3.28 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ದಾವುದ್ ಇಬ್ರಾಹಿಂ ಹಾಗೂ ಆತನ ಪಿತ್ರಾರ್ಜಿತ ಈ ಆಸ್ತಿಗಳನ್ನು 1976ರ ಕಳ್ಳಸಾಗಾಣೆ ಹಾಗೂ ವಿದೇಶಿ ವಿನಿಮಯ ಮ್ಯಾನಿಪ್ಯುಲೇಟರ್ ಕಾಯ್ದೆಯ ಅಡಿಯಲ್ಲಿ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು.
2000ನೇ ಇಸವಿಯಿಂದ ದಾವುದ್ ಇಬ್ರಾಹಿಂ ಆಸ್ತಿಗಳನ್ನು ಸರ್ಕಾರ ಹರಾಜು ಮಾಡುತ್ತಿದೆ. ಈ ವೇಳೆ ಯಾರೂ ಕೂಡ ಹರಾಜಿನಲ್ಲಿ ಪಾಲ್ಗೊಂಡಿರಲಿಲ್ಲ.