ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊರೋನಾ ಒಮಿಕ್ರಾನ್ ರೂಪಾಂತರಿ ಮತ್ತು ಅದರ ಮೂಲರೂಪದ ವಿರುದ್ಧ ಹೋರಾಡಲು ಮಾಡೆರ್ನಾ ಲಸಿಕೆಗೆ ಯುಕೆ ಅನುಮೋದನೆ ನೀಡಿದೆ.
ಹೀಗಾಗಿ ಮಾಡೆರ್ನಾ ಲಸಿಕೆಗೆ ಅನುಮೋದನೆ ನೀಡಿದ ಮೊದಲ ದೇಶವಾಗಿದೆ ಯುಕೆ.
ಮೆಡಿಸಿನ್ ಆಂಡ್ ಹೆಲ್ತ್ಕೇರ್ ಪ್ರಾಡಕ್ಟ್ ರೆಗ್ಯುಲೇಟರಿ ಏಜೆನ್ಸಿ (MHRA) ವಯಸ್ಕರಿಗೆ ಬೂಸ್ಟರ್ ಡೋಸ್ ಆಗಿ ಅಮೆರಿಕದ ಔಷಧ ಕಂಪನಿ ಮಾಡೆರ್ನಾ ತಯಾರಿಸಿದ ಲಸಿಕೆಯನ್ನು ಅನುಮೋದಿಸಿದೆ. ಈ ಬಗ್ಗೆ ಹೇಳಿಕೆ ನೀಡಿದ ಮೆಡಿಸಿನ್ ಆಂಡ್ ಹೆಲ್ತ್ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರಿ ಏಜೆನ್ಸಿ (MHRA) ವಯಸ್ಕರಿಗೆ ನೀಡುವ ಬೂಸ್ಟರ್ ಡೋಸ್ಗಳಿಗೆ ಲಸಿಕೆಯನ್ನು ಅನುಮೋದಿಸಿದೆ ಎಂದು ಹೇಳಿದೆ.
ಯುಕೆ ನಿಯಂತ್ರಕದ ಸುರಕ್ಷತೆ, ಗುಣಮಟ್ಟ ಮತ್ತು ಪರಿಣಾಮಕಾರಿ ಮಾನದಂಡವನ್ನು ಪೂರೈಸುವುದರ ಜತೆಗೆ ಎರಡೂ ರೂಪಾಂತರಿಗಳ ವಿರುದ್ಧ ಪ್ರಬಲ ಪರಿಣಾಮಕಾರಿಯಾಗಿ ಕಂಡು ಬಂದ ನಂತರ ಇದಕ್ಕೆ ಅನುಮೋದನೆ ನೀಡಲಾಗಿದೆ.
ಒಮಿಕ್ರಾನ್ (BA.1) ಮತ್ತು ಮೂಲ 2020 ವೈರಸ್ ಎರಡರ ವಿರುದ್ಧವೂ ಬೂಸ್ಟರ್ ಬಲವಾದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಪ್ರಚೋದಿಸಿದೆ ಎಂದು ತೋರಿಸಿರುವ ಕ್ಲಿನಿಕಲ್ ಪ್ರಯೋಗದ ಡೇಟಾವನ್ನು ಆಧರಿಸಿ ಎಂಎಚ್ಆರ್ ಎ ತನ್ನ ಅನುಮೋದನೆಯನ್ನು ನೀಡಿದೆ ಎಂದು ಸಂಸ್ಥೆ ಹೇಳಿದೆ.
ಈ ಲಸಿಕೆ ಪ್ರಸ್ತುತ ಪ್ರಬಲವಾದ ಒಮಿಕ್ರಾನ್ ವೈರಸ್ಗಳಾದ BA.4 ಮತ್ತು BA.5 ವಿರುದ್ಧ ಉತ್ತಮ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ ಎಂದು ಕಂಡುಬಂದಿದೆ.