ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುದ್ದಪೀಡಿತ ಇಸ್ರೇಲ್‌ಗೆ ಯುಎಸ್ ಅಧ್ಯಕ್ಷ ಜೋ ಬಿಡೆನ್ ಭೇಟಿ ಬೆನ್ನಲ್ಲೇ, ಇಂದು ಯುಕೆ ಪ್ರಧಾನಿ ರಿಷಿ ಸುನಕ್ ಭೇಟಿ ನೀಡಲಿದ್ದಾರೆ.
ಇಸ್ರೇಲ್‌ಗೆ ರಿಷಿ ಸುನಕ್ ಭೇಟಿ ವೇಳೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ಅವರ ಕಚೇರಿ ಮಾಹಿತಿ ನೀಡಿದೆ. ಈ ಮೂಲಕ ಹಲವು ಪ್ರಬಲ ರಾಷ್ಟ್ರಗಳು ಇಸ್ರೇಲ್‌ಗೆ ಬಂಬಲ ಸೂಚಿಸಿವೆ.
ಆಸ್ಪತ್ರೆ ಮೇಲಿನ ದಾಳಿಗೆ ಖಂಡನೆ
ಸುನಕ್ ತನ್ನ ಭೇಟಿಯ ಮುನ್ನ ಹೇಳಿಕೆಯಲ್ಲಿ ಈ ಸಂಘರ್ಷದಲ್ಲಿ ಪ್ರತಿಯೊಬ್ಬ ನಾಗರಿಕರ ಸಾವು ದುರಂತವಾಗಿದೆ. ಹಮಾಸ್‌ನ ಭೀಕರತೆಯ ದಾಳಿಯಿಂದಾಗಿ ಹಲವು ಸಾವುಗಳು ಸಂಭವಿಸಿದೆ ಎಂದಿದ್ದಾರೆ.
ಗಾಜಾ ಆಸ್ಪತ್ರೆ ಮೇಲೆ ನಡೆದ ದಾಳಿಯಿಂದಾಗಿ ನೂರಾರು ಪ್ಯಾಲೆಸ್ಟೀನಿಯರು ಸಾವನ್ನಪ್ಪಿದ ಘಟನೆಯನ್ನು ರಿಷಿ ಸುನಕ್ ತೀವ್ರವಾಗಿ ಖಂಡಿಸಿದ್ದಾರೆ. “ಸಂಘರ್ಷ ಮತ್ತಷ್ಟು ತೀವ್ರವಾಗುವದನ್ನು ತಪ್ಪಿಸಲು ವಿಶ್ವದ ಎಲ್ಲಾ ನಾಯಕರು ಈ ಕ್ಷಣದಲ್ಲಿ ಒಗ್ಗೂಡಬೇಕು, ನಾವು ಕೂಡ ಆ ಪ್ರಯತ್ನ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.
ರಿಷಿ ಸುನಕ್ ಅವರು ಸಾಧ್ಯವಾದಷ್ಟು ಬೇಗ ಗಾಜಾಕ್ಕೆ ಮಾನವೀಯ ಸಹಾಯವನ್ನು ಘೋಷಿಸುವುದು ಹಾಗೂ ಗಾಜಾದಲ್ಲಿರುವ ಬ್ರಿಟಿಷ್ ನಾಗರಿಕರ ನಿರ್ಗಮನವನ್ನು ಸಾಧ್ಯವಾಗಿಸಲು ಮಾರ್ಗಗಳನ್ನು ತೆರೆಯಲು ಕರೆ ನೀಡಿದ್ದಾರೆ.