ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾದ 4 ವಾಯುನೆಲೆ ಮೇಲೆ ಭಾನುವಾರ ಉಕ್ರೇನ್ ಡ್ರೋನ್ ದಾಳಿ ನಡೆಸಿದ್ದನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅದ್ಭುತ ಕಾರ್ಯಾಚರಣೆ ಎಂದು ಶ್ಲಾಘಿಸಿದ್ದಾರೆ.
ಉಕ್ರೇನ್ ಡ್ರೋನ್ ದಾಳಿ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಈ ದಾಳಿ ರಷ್ಯಾದ ಯುದ್ಧ ಸಾಮರ್ಥ್ಯವನ್ನು ಕುಗ್ಗಿಸುವ ಮತ್ತು ಯುದ್ಧದ ಪರಿಣಾಮಗಳನ್ನು ರಷ್ಯಾ ಕೂಡ ಅನುಭವಿಸುವಂತೆ ಮಾಡುವ ಉದ್ದೇಶವನ್ನು ಹೊಂದಿತ್ತು. ‘ಉಕ್ರೇನ್ ಸ್ಪೈಡರ್ ವೆಬ್’ ಕಾರ್ಯಾಚರಣೆಯಲ್ಲಿ 117 ಡ್ರೋನ್ಗಳನ್ನು ಬಳಕೆ ಮಾಡಲಾಗಿದೆ. ರಷ್ಯಾದ 40ಕ್ಕೂ ಹೆಚ್ಚು ಸೇನಾ ವಿಮಾನಗಳು ನಾಶಗೊಂಡಿವೆ. ಉಕ್ರೇನ್ನ ಭದ್ರತಾ ಸೇವೆ ಮತ್ತು ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ” ಎಂದು ತಿಳಿಸಿದ್ದಾರೆ.