ಭಾರತಕ್ಕೆ ಯುರೋಪಿನ ಎಂಟು ಮಂದಿ ನಾಯಕರು: ಉಕ್ರೇನ್‌ ಯುದ್ಧದ ಬಗ್ಗೆ ಚರ್ಚೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಂತರಾಷ್ಟ್ರೀಯ ನಾಯಕರ ಕಣ್ಣು ಇದೀಗ ಭಾರತದ ಮೇಲೆ ಬಿದ್ದಿದೆ. ಬ್ರಿಟನ್ ಪ್ರಧಾನಿ, ಬೋರಿಸ್ ಜಾನ್ಸನ್ ಭಾರತಕ್ಕೆ ಭೇಟಿ ನೀಡಿದ ಬಳಿಕ ಯುರೋಪಿಯನ್ ಕಮಿಷನ್ ಅಧ್ಯಕ್ಷರಾದ ಉರ್ಸುಲಾ ವಾನ್ ಡೆರ್ ಲೇಯೆನ್ ಸೇರಿದಂತೆ ಯುರೋಪಿನ ಪ್ರಮುಖ ಎಂಟು ಮಂದಿ ನಾಯಕರು ಮತ್ತು ಮಂತ್ರಿಗಳು ಇಂದಿನಿಂದ ಕೆಲ ದಿನಗಳ ಕಾಲ ಭಾರತದಲ್ಲಿ ಇರಲಿದ್ದಾರೆ.

2019 ರವರೆಗೆ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರ ನೇತೃತ್ವದಲ್ಲಿ ಜರ್ಮನಿಯ ರಕ್ಷಣಾ ಸಚಿವರಾಗಿದ್ದ, ವಾನ್ ಡೆರ್ ಲೇಯೆನ್ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದು, ರಷ್ಯಾ-ಉಕ್ರೇನ್ ಸಂಘರ್ಷದಿಂದ ಉದ್ಭವಿಸಿರುವ ಬಿಕ್ಕಟ್ಟಿನ ಬಗ್ಗೆ ಚರ್ಚೆ ಮಾಡುವ ನಿರೀಕ್ಷೆಯಿದೆ.

ಪೋಲೆಂಡ್, ಲಿಥುವೇನಿಯಾ, ಸ್ಲೊವೇನಿಯಾ, ಪೋರ್ಚುಗಲ್, ನೆದರ್ಲ್ಯಾಂಡ್ಸ್, ನಾರ್ವೆ ಮತ್ತು ಲಕ್ಸೆಂಬರ್ಗ್‌ನ ವಿದೇಶಾಂಗ ಮಂತ್ರಿಗಳು ಸಹ ಭಾರತಕ್ಕೆ ಬರುವ ನಿರೀಕ್ಷೆಯಿದೆ.

ಏಪ್ರಿಲ್ 25ರಿಂದ 27 ರವರೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ಆಯೋಜಿಸಿರುವ ಭೌಗೋಳಿಕ-ರಾಜಕೀಯ ಮತ್ತು ಭೌಗೋಳಿಕ-ಅರ್ಥಶಾಸ್ತ್ರದ ಪ್ರಮುಖ ಸಮ್ಮೇಳನ ರೈಸಿನಾ ಸಂವಾದಕ್ಕೆ ಎಲ್ಲಾ ನಾಯಕರು ಹಾಜರಾಗಲಿದ್ದಾರೆ. ಈ ಸಂದರ್ಭದಲ್ಲಿ ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ನಾಯಕರು ಸಂಭಾಷಣೆ ನಡೆಸುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!