ಹೊಸ ದಿಗಂತ ವರದಿ, ಕಲಬುರಗಿ:
ಉಕ್ರೇನ್ ಮತ್ತು ರಷ್ಯಾ ಮಧ್ಯೆ ಯುದ್ದ ನಡೆಯುತ್ತಿರುವ ಹಿನ್ನಲೆಯಲ್ಲಿ, ಉಕ್ರೇನ್,ನ ಕಿವ್ ನಗರದಲ್ಲಿ ಕಲಬುರಗಿ ನಗರದ ವಿದ್ಯಾರ್ಥಿನಿಯೋರ್ವಳು ವಾಸವಾಗಿರುವ ಮಾಹಿತಿ ಬಂದಿದೆ.
ಗುಲ್ಬರ್ಗಾ ವಿಶ್ವವಿದ್ಯಾಲಯ ಬಯೋ ಕೆಮಿಸ್ಟ್ರಿ ವಿಭಾಗದ ಪ್ರಾಧ್ಯಪಕಿ ಲಲಿತಾ ಜೊನ್ನ ಎಂಬುವವರ ಮಗಳು ಜೀವಿತಾ ಉಕ್ರೇನ್,ನ ಕಿವ್ ನಗರದಲ್ಲಿ ಎಮ್‌ಬಿಬಿಎಸ್ ಏಳನೇ ಸೆಮಿಸ್ಟರ್ ವ್ಯಾಸoಗ ಮಾಡುತ್ತಿದ್ದು, ಗುರುವಾರ ಮಧ್ಯಾಹ್ನ ಕಳೆದ ಅರ್ಧ ಗಂಟೆ ಹಿಂದೆ ತಾಯಿ ಜೊತೆ ಜೀವಿತಾ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ.
ವಿಡಿಯೋ ಕರೆ ಮಾಡಿ ನಾನು ಕಿರಾಣ ವಸ್ತುಗಳನ್ನು ತರಲು ಮಾರುಕಟ್ಟೆಗೆ ಬಂದಿರುವುದಾಗಿ ಜೀವಿತಾ ಹೇಳಿದ್ದು, ನಾನು ಸುರಕ್ಷತೆಯಿಂದ ಇದಿದ್ದು, ಆತಂಕ ಪಡುವ ಅಗತ್ಯ ಇಲ್ಲ ಎಂದು ತಾಯಿಗೆ ಹೇಳಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ದ ನಡೆಯುತ್ತಿರುವ ಹಿನ್ನಲೆಯಲ್ಲಿ ಸಹಜವಾಗಿ ಜೀವಿತಾಳ ಕುಟುಂಬಸ್ಥರು ಆತಂಕಗೊಂಡಿದ್ದಾರೆ.