ಯುದ್ಧ ಪ್ರಾರಂಭವಾದಾಗಿನಿಂದ 13 ಸಾವಿರಕ್ಕೂ ಅಧಿಕ ಮಕ್ಕಳನ್ನು ರಷ್ಯಾ ಅಪಹರಿಸಿದೆ ಎಂದ ಉಕ್ರೇನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಫೆಬ್ರವರಿ ಆಕ್ರಮಣದ ನಂತರ 13,000 ಕ್ಕೂ ಹೆಚ್ಚು ಉಕ್ರೇನಿಯನ್ ಮಕ್ಕಳನ್ನು ಉಕ್ರೇನ್‌ನಿಂದ ರಷ್ಯಾ ಅಪಹರಿಸಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಸಲಹೆಗಾರ ಶುಕ್ರವಾರ ಹೇಳಿದ್ದಾರೆ. ನಿಜವಾದ ಅಂಕಿ ಅಂಶಗಳು ಇದಕ್ಕಿಂತ ತುಂಬಾ ಹೆಚ್ಚಿರಬಹುದು ಎಂದೂ ಅವರು ಹೇಳಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಕೈವ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ, ಮಕ್ಕಳ ಹಕ್ಕುಗಳನ್ನು ಉಲ್ಲೇಖಿಸಿ ಮಾತನಾಡಿದ ಸಲಹೆಗಾರ ದರಿಯಾ ಗೆರಾಸಿಮ್‌ಚುಕ್ “ಮಾಸ್ಕೋದ ಅಧಿಕಾರಿಗಳು ರಷ್ಯಾದ ಪಡೆಗಳು ಆಕ್ರಮಿಸಿಕೊಂಡಿರುವ ಪ್ರದೇಶಗಳಿಂದ ಮಕ್ಕಳನ್ನು ಗಡೀಪಾರು ಮಾಡಿದ್ದಾರೆ ಅಥವಾ ಸ್ಥಳಾಂತರಿಸಿದ್ದಾರೆ. ಮತ್ತು ಇದು, ದುರದೃಷ್ಟವಶಾತ್, ಅಂತಿಮ ಅಂಕಿ ಅಲ್ಲ, ಬಲವಂತವಾಗಿ ಅಪಹರಿಸಲ್ಪಟ್ಟ ಮಕ್ಕಳ ನಿಜವಾದ ಸಂಖ್ಯೆ ನೂರಾರು ಸಾವಿರಗಳಲ್ಲಿರಬಹುದು” ಅವರು ಹೇಳಿದ್ದಾರೆ.

ಉಕ್ರೇನ್‌ನ ರಾಷ್ಟ್ರೀಯ ಮಾಹಿತಿ ಬ್ಯೂರೋ ಪ್ರಕಾರ, ರಷ್ಯಾವು ಉಕ್ರೇನ್ ದೇಶದ ಮೇಲೆ ಆಕ್ರಮಣ ಮಾಡಿದ ನಂತರ 13,112 ಕ್ಕಿಂತ ಕಡಿಮೆ ಮಕ್ಕಳನ್ನು ಗಡೀಪಾರು ಮಾಡಲಾಗಿದೆ. ಕನಿಷ್ಠ 443 ಮಕ್ಕಳು ಕೊಲ್ಲಲ್ಪಟ್ಟಿದ್ದಾರೆ ಮತ್ತು 855 ಮಂದಿ ಗಾಯಗೊಂಡಿದ್ದಾರೆ. ಇನ್ನೂ 330 ಮಂದಿ ನಾಪತ್ತೆಯಾಗಿದ್ದಾರೆ.

ಜಿನೀವಾ ಕನ್ವೆನ್ಷನ್ಸ್ ಅಡಿಯಲ್ಲಿ, ಯುದ್ಧ ಮಾಡುವ ಪಕ್ಷವು ಕಡ್ಡಾಯ ಕಾರಣಗಳು ಇಲ್ಲದೇ ಮತ್ತೊಂದು ದೇಶದ ಮಕ್ಕಳನ್ನು ತನ್ನ ಸ್ವಂತ ಪ್ರದೇಶಕ್ಕೆ ವರ್ಗಾಯಿಸುವುದು ಅಪರಾಧವಾಗಿದೆ, ಈ ಸಂದರ್ಭದಲ್ಲಿ ಮಕ್ಕಳು ಅವರ ಕುಟುಂಬಗಳಿಗೆ ಮತ್ತು ಅವರ ದೇಶಕ್ಕೆ ಮಕ್ಕಳ ವಾಪಸ್ಸಾಗಲು ಅನುಕೂಲವಾಗುವಂತೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಉಲ್ಲೇಖಿಸಲಾಗಿದೆ.

ಆದರೆ ಈ ಕುರಿತು ರಷ್ಯಾವು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳ ವರದಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!