ಹೊಸದಿಗಂತ ಡಿಜಿಟಲ್ ಡೆಸ್ಕ್
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವು ಹತ್ತು ತಿಂಗಳು ಪೂರೈಸಿದೆ, ಯುದ್ಧ ಮತ್ತಷ್ಟು ತೀವ್ರಗೊಳ್ಳುವ ಸೂಚನೆಗಳು ಲಭಿಸುತ್ತಿದ್ದು, ಉಕ್ರೇನಿಯನ್ ಪಡೆಗಳು ಭಾನುವಾರ ರಷ್ಯಾದ ಖಾಸಗಿ ವ್ಯಾಗ್ನರ್ ಮಿಲಿಟರಿ ಗುಂಪಿನ ಪ್ರಧಾನ ಕಛೇರಿಯ ಮೇಲೆ ದಾಳಿ ಮಾಡಿ ಹಲವಾರು ಜನರನ್ನು ಕೊಂಡುಹಾಕಿವೆ.
ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳಲಾದ ಚಿತ್ರಗಳಲ್ಲಿ ಕಟ್ಟಡವು ಬಹುಪಾಲು ಅವಶೇಷಗಳಾಗಿ ಕುಸಿದಿರುವುದನ್ನು ತೋರಿಸಿದೆ.
ರಷ್ಯಾದ ಖಾಸಗಿ ವ್ಯಾಗ್ನರ್ ಮಿಲಿಟರಿ ಗುಂಪಿನ ಸದಸ್ಯರು ನೆಲೆಗೊಂಡಿದ್ದ ಹೋಟೆಲ್ ಮೇಲೆ ಉಕ್ರೇನಿಯನ್ ಪಡೆಗಳು ದಾಳಿ ನಡೆಸಿವೆ ಎಂದು ಪೂರ್ವ ಉಕ್ರೇನ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಕ್ರೇನ್ ದಾಳಿಯು ಹಲವಾರು ರಷ್ಯನ್ನರನ್ನು ಕೊಂದಿದೆ ಎಂದು ರಷ್ಯಾ ಆಕ್ರಮಿತ ಲುಹಾನ್ಸ್ಕ್ ಪ್ರದೇಶದ ಗವರ್ನರ್ ಹೇಳಿದ್ದಾರೆ.
ಅವರು ಸಾವುನೋವುಗಳ ಸಂಖ್ಯೆಯನ್ನು ಉಲ್ಲೇಖಿಸದಿದ್ದರೂ, “ಅಲ್ಲಿ ಇದ್ದವರಲ್ಲಿ ಅಪಾರ ಸಂಖ್ಯೆಯ ಜನರು ಸತ್ತರು. ಬದುಕುಳಿಯುವಲ್ಲಿ ಯಶಸ್ವಿಯಾದವರಲ್ಲಿ ಕನಿಷ್ಠ 50 ಪ್ರತಿಶತದಷ್ಟು ಜನರು ವೈದ್ಯಕೀಯ ಆರೈಕೆಗಳನ್ನು ಪಡೆದರೂ ಬದುಕುವುದು ಅನುಮಾನ” ಎಂದು ಹೇಳಿದ್ದಾರೆ.
ವ್ಯಾಗ್ನರ್ ಗುಂಪು ರಷ್ಯಾದೊಂದಿದೆ ನಿಕಟ ಸಂಬಂಧವನ್ನು ಹೊಂದಿರುವ ಖಾಸಗಿ ಮಿಲಿಟರಿ ಗುತ್ತಿಗೆದಾರರ ಗುಂಪು. ವ್ಯಾಗ್ನರ್‌ನ ಪಡೆಗಳು ಉಕ್ರೇನ್‌ನ ಕೆಲವು ಭಾಗಗಳಲ್ಲಿ ಹೋರಾಡುತ್ತಿವೆ ಮತ್ತು ಹಲವಾರು ಆಫ್ರಿಕನ್ ದೇಶಗಳಲ್ಲಿ ಸಹ ನಿಯೋಜಿಸಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ