ರಷ್ಯಾದ ವಾಯುನೆಲೆ ಮೇಲೆ ಉಕ್ರೇನ್‌ ಡ್ರೋನ್ ದಾಳಿ: 40ಕ್ಕೂ ಹೆಚ್ಚು ಯುದ್ಧ ವಿಮಾನ ನಾಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಕ್ರೇನ್ ರಷ್ಯಾದ ಮೇಲೆ ಅತಿದೊಡ್ಡ ಡ್ರೋನ್ ದಾಳಿ ಪ್ರಾರಂಭಿಸಿದೆ. ಪೂರ್ವ ಸೈಬೀರಿಯಾದಲ್ಲಿರುವ ರಷ್ಯಾದ ಸೇನಾ ನೆಲೆಯ ಮೇಲೆ ದಾಳಿ ಮಾಡಿದೆ.

ಇರ್ಕುಟ್ಕ್ಸ್‌ ಪ್ರಾಂತ್ಯದ ರಷ್ಯಾದ ಗವರ್ನರ್ ದಾಳಿಯನ್ನು ದೃಢಪಡಿಸಿದ್ದಾರೆ. ಉಕ್ರೇನ್‌ನ ವಿಮಾನವು ಶ್ರೀದ್ನಿ ಗ್ರಾಮದಲ್ಲಿ ಮಿಲಿಟರಿ ಘಟಕದ ಮೇಲೆ ದಾಳಿ ಮಾಡಿದೆ.

ಉಕ್ರೇನ್‌ನ ಭದ್ರತಾ ಪಡೆ ಸೆಕ್ಯುರಿಟಿ ಸರ್ವಿಸ್ ಆಫ್ ಉಕ್ರೇನ್ (SBU) ನಡೆಸಿದ ಈ ದೊಡ್ಡ ಪ್ರಮಾಣದ ವಿಶೇಷ ಕಾರ್ಯಾಚರಣೆಯಲ್ಲಿ ರಷ್ಯಾದ ವಾಯುನೆಲೆಗಳ 40ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಎಸ್‌ಬಿಯು ಭಾನುವಾರ ಒಲೆನ್ಯಾ ಮತ್ತು ಬೆಲಾಯಾದಲ್ಲಿನ ವಾಯುನೆಲೆಗಳು ಸೇರಿದಂತೆ ರಷ್ಯಾದ 4 ಮಿಲಿಟರಿ ವಾಯುನೆಲೆಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಿದೆ ಎಂದು ರಾಯಿಟರ್ಸ್‌ ಸುದ್ದಿಸಂ‍ಸ್ಥೆ ತಿಳಿಸಿದೆ.

ಇದು ಉಕ್ರೇನ್‌ನ ಅತ್ಯಂತ ಭೀಕರ ದಾಳಿ ಎನ್ನಲಾಗಿದ್ದು, ಇದರಿಂದ ರಷ್ಯಾಕ್ಕೆ ಗಮನಾರ್ಹ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ರಷ್ಯಾದ ಇರ್ಕುಟ್ಸ್ಕ್ ಪ್ರದೇಶದಲ್ಲಿನ ಮಿಲಿಟರಿ ಘಟಕದ ಮೇಲೆ ಡ್ರೋನ್ ದಾಳಿ ಮಾಡುವ ವಿಡಿಯೊ ಇದೀಗ ಸೋಶಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಇದೀಗ ರಷ್ಯಾ ಎಚ್ಚೆತ್ತುಕೊಂಡಿದ್ದು, ಉಕ್ರೇನ್‌ ದಾಳಿಯನ್ನು ತಡೆಗಟ್ಟಲು ಸೇನೆ ಸಜ್ಜಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!