January20, 2026
Tuesday, January 20, 2026
spot_img

ರಷ್ಯಾದ ಟ್ಯಾಂಕರ್‌ಗಳ ಮೇಲೆ ಉಕ್ರೇನ್ ಡ್ರೋನ್ ಹಡಗುಗಳ ಅಟ್ಯಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಪ್ಪು ಸಮುದ್ರದ ವಲಯದಲ್ಲಿ ಶುಕ್ರವಾರ ತಡರಾತ್ರಿ ಸಂಚಲನ ಮೂಡಿಸಿದ ಘಟನೆಯಲ್ಲಿ, ವಿರಾಟ್ ಮತ್ತು ಕೈರೋಸ್ ಎಂದು ಗುರುತಿಸಲಾದ ರಷ್ಯಾದ ಎರಡು ಪ್ರಮುಖ ಟ್ಯಾಂಕರ್‌ಗಳ ಮೇಲೆ ಮಾನವರಹಿತ ಡ್ರೋನ್ ಹಡಗು ದಾಳಿ ನಡೆಸಿದೆ.

ದಾಳಿಯ ತೀವ್ರತೆ ಎಷ್ಟಿತ್ತೆಂದರೆ, 2002 ರಲ್ಲಿ ನಿರ್ಮಿಸಲಾದ ‘ಕೈರೋಸ್’ ಟ್ಯಾಂಕರ್ ಈಗ ಸಂಪೂರ್ಣವಾಗಿ ಮುಳುಗುವ ಅಪಾಯದಲ್ಲಿದೆ. ಈ ದಾಳಿಯ ಸಂಪೂರ್ಣ ಹೊಣೆಯನ್ನು ಉಕ್ರೇನ್ ಹೊತ್ತುಕೊಂಡಿದೆ.

ಸಂತಸದ ವಿಷಯವೆಂದರೆ, ತಕ್ಷಣದ ರಕ್ಷಣಾ ಕಾರ್ಯಾಚರಣೆಯಿಂದಾಗಿ, ಎರಡು ಟ್ಯಾಂಕರ್‌ಗಳಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ವಿರಾಟ್ ಟ್ಯಾಂಕರ್ ಅನ್ನು 2018 ರಲ್ಲಿ ನಿರ್ಮಿಸಲಾಗಿತ್ತು.

ಕೈರೋಸ್ ಟ್ಯಾಂಕರ್ ಅನ್ನು 2002 ರಲ್ಲಿ ನಿರ್ಮಿಸಲಾಗಿತ್ತು.

ಕಪ್ಪು ಸಮುದ್ರದ ಮೂಲಕ ಇಂಧನ ಮತ್ತು ಸರಕು ಸಾಗಾಟದಲ್ಲಿ ತೊಡಗಿದ್ದ ರಷ್ಯಾದ ಹಡಗುಗಳ ಮೇಲೆ ಉಕ್ರೇನ್ ಹೆಚ್ಚುತ್ತಿರುವ ದಾಳಿಗಳ ಸರಣಿಯಲ್ಲಿ ಇದೊಂದು ಮಹತ್ವದ ಘಟನೆಯಾಗಿದೆ.

Must Read