ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ಬಜೆಟ್ ಬಗ್ಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಕೆಲವರ ತುಷ್ಟಿಕರಣ! ಬಹುತೇಕರ ತುಚೀಕರಣ!! ಇದು ರಾಜ್ಯ ಕಾಂಗ್ರೆಸ್ ಸರಕಾರದ 2025-26ನೇ ಸಾಲಿನ ಬಜೆಟ್ ನ ಹೂರಣ ಎಂದು ಟೀಕಿಸಿದ್ದಾರೆ.
ಇನ್ನು ಬಿಜೆಪಿ ಕೂಡ ಬಜೆಟ್ ಬಗ್ಗೆ ಕಿಡಿಕಾರಿದೆ. ಭಂಡ ಹಾಗೂ ಭ್ರಷ್ಟ ಸಿಎಂ ಸಿದ್ದರಾಮಯ್ಯ ಮಂಡಿಸಿದ ಸಂವಿಧಾನ ವಿರೋಧಿ ಬಜೆಟ್ ನ ವೈಶಿಷ್ಟ್ಯಗಳು. ಬಜೆಟ್ನಲ್ಲಿಯೂ ಸಹ ಮುಂದುವರೆದ ಒಲೈಕೆ ರಾಜಕಾರಣ. ಕರ್ನಾಟಕದ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಾಲ ಮಾಡಿರುವ ಆರ್ಥಿಕ ವರ್ಷ ಎಂಬ ಕುಖ್ಯಾತಿ ಪಡೆದಿದೆ ಎಂದು ವಾಗ್ದಾಳಿ ನಡೆಸಿದೆ.