ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಅಂಡರ್-19 ಪುರುಷರ ಕ್ರಿಕೆಟ್ ವಿಶ್ವಕಪ್ನ (U19 World Cup 2024) ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಜನವರಿ 19 ರಿಂದ ಫ್ರೆಬ್ರವರಿ 11 ರವರೆಗೆ ಸೌತ್ ಆಫ್ರಿಕಾದಲ್ಲಿ ನಡೆಯಲಿದೆ. ಬ್ಲೋಮ್ಫಾಂಟೈನ್ನ ಮಂಗಾಂಗ್ ಓವಲ್ ಮೈದಾನ, ಪೂರ್ವ ಲಂಡನ್ನ ಬಫಲೋ ಪಾರ್ಕ್ ಸ್ಟೇಡಿಯಂ, ಕಿಂಬರ್ಲಿಯಲ್ಲಿ ಕಿಂಬರ್ಲಿ ಓವಲ್ ಮೈದಾನ, ಪಾಚೆಫ್ಸ್ಟ್ರೂಮ್ನ ಜೆಬಿ ಮಾರ್ಕ್ಸ್ ಓವಲ್ ಮತ್ತು ಬೆನೋನಿಯ ವಿಲೋಮೂರ್ ಪಾರ್ಕ್ ಸ್ಟೇಡಿಯಂಗಳಲ್ಲಿ ಒಟ್ಟು 41 ಪಂದ್ಯಗಳು ನಡೆಯಲಿದೆ.
ಈ ಹಿಂದೆ ಶ್ರೀಲಂಕಾ ಅಂಡರ್-19 ವಿಶ್ವಕಪ್ ಆಯೋಜನೆಯ ಹಕ್ಕನ್ನು ಹೊಂದಿತ್ತು. ಆದರೆ ನವೆಂಬರ್ನಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಐಸಿಸಿ ಅಮಾನತುಗೊಳಿಸಿದೆ. ಹೀಗಾಗಿ 15ನೇ ಆವೃತ್ತಿಯ ಕಿರಿಯರ ವಿಶ್ವಕಪ್ನ್ನು ಸೌತ್ ಆಫ್ರಿಕಾಗೆ ಸ್ಥಳಾಂತರಿಸಲಾಗಿದೆ.
ಹಾಲಿ ಚಾಂಪಿಯನ್ ಭಾರತ ತಂಡವು ಜನವರಿ 20 ರಂದು ಬಾಂಗ್ಲಾದೇಶ್ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.
16 ತಂಡಗಳು 4 ಗ್ರೂಪ್:
ಅಂಡರ್-19 ವಿಶ್ವಕಪ್ನಲ್ಲಿ ಒಟ್ಟು 16 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ.
ಅಂಡರ್-19 ವಿಶ್ವಕಪ್ ಗ್ರೂಪ್ಗಳು:
ಗ್ರೂಪ್-A
ಭಾರತ
ಬಾಂಗ್ಲಾದೇಶ್
ಯುಎಸ್ಎ
ಐರ್ಲೆಂಡ್
ಗ್ರೂಪ್-B
ಇಂಗ್ಲೆಂಡ್
ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್
ಸ್ಕಾಟ್ಲೆಂಡ್
ಗ್ರೂಪ್-C
ಆಸ್ಟ್ರೇಲಿಯಾ
ಶ್ರೀಲಂಕಾ
ಝಿಂಬಾಬ್ವೆ
ನಮೀಬಿಯಾ
ಗ್ರೂಪ್-D
ಅಫ್ಘಾನಿಸ್ತಾನ್
ಪಾಕಿಸ್ತಾನ್
ನ್ಯೂಝಿಲೆಂಡ್
ನೇಪಾಳ
ಭಾರತ ತಂಡದ ಲೀಗ್ ಹಂತದ ವೇಳಾಪಟ್ಟಿ:
ಜನವರಿ 20- ಭಾರತ vs ಬಾಂಗ್ಲಾದೇಶ್.
ಜನವರಿ 22- ಭಾರತ vs ಐರ್ಲೆಂಡ್.
ಜನವರಿ 28- ಭಾರತ vs ಯುಎಸ್ಎ