SHOCKING VIDEO| ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದ ನಿರ್ಮಾಣ ಹಂತದ ಮೇಲ್ಸೇತುವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೇಲ್ಸೇತುವೆಯೊಂದು ಕಣ್ಣೆದುರಲ್ಲಿಯೇ ಕುಸಿದುಬಿದ್ದ ಶಾಕಿಂಗ್ ಘಟನೆ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚಿಪ್ಲುನ್ ನಗರದಲ್ಲಿ ನಡೆದಿದ್ದು, ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗ ಸಖತ್ ವೈರಲ್ ಆಗುತ್ತಿದೆ.

ಈ ಭಾಗದಲ್ಲಿ ವಾಹನಗಳು ಎಂದಿನಂತೆ ಸಂಚರಿಸುತ್ತಿವೆ. ಪಾದಚಾರಿಗಳು ತಮ್ಮಪಾಡಿಗೆ ಸಾಗುತ್ತಿದ್ದಾರೆ. ಇದೇ ಕ್ಷಣದಲ್ಲಿ ಮುಂದಿರುವ ಭಾರೀ ಗಾತ್ರದ ಮೇಲ್ಸೇತುವೆ ಕಣ್ಣೆದುರೇ ಕುಸಿದು ಬೀಳುತ್ತಿದೆ…ಜನತೆಗೆ ಏನಾಗುತ್ತಿದೆ ಎಂದು ಅರಿವಾಗುವ ಮುನ್ನ ಧೂಳಿನ ಕಣಗಳು ಎಲ್ಲೆಡೆ ವ್ಯಾಪಿಸಿಕೊಳ್ಳುತ್ತಿದೆ….

ವಿಡಿಯೋದಲ್ಲಿರುವ ಘಟನೆಯ ದೃಶ್ಯಗಳು ಮೈ ಜುಂ ಎನ್ನಿಸುವಂತೆ ಮಾಡುತ್ತಿವೆ.

ಈ ಘಟನೆ ನಡೆಯುತ್ತಿದ್ದಂತೆಯೇ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಕ್ಕೆ ಮುಂದಾದವು. ಎಲ್ಲೆಲ್ಲೂ ಹಬ್ಬಿದ ಧೂಳಿನ ಕಣಗಳು ಘಟನೆಯ ಭೀಕರತೆಯನ್ನು ಸಾರಿದವು. ಅದೃಷ್ಟವಶಾತ್ ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!