ಹೊಸದಿಗಂತ ಡಿಜಿಟಲ್ ಡೆಸ್ಕ್:
ಶುದ್ಧ ಗಾಳಿ ಕಾರ್ಯಕ್ರಮವನ್ನು ಆರಂಭಿಸಿದ ಸುಮಾರು ಆರು ವರ್ಷಗಳ ನಂತರ, ದತ್ತಾಂಶ ಮತ್ತು ವಿಶ್ಲೇಷಣೆಗಳು ಈ ಕಾರ್ಯಕ್ರಮದಲ್ಲಿ ತಪ್ಪಾದ ಆದ್ಯತೆ ಮತ್ತು ಪಾರದರ್ಶಕತೆಯ ಕೊರತೆಯನ್ನು ತೋರಿಸುತ್ತವೆ. ಶುದ್ಧ ಗಾಳಿ ಯೋಜನೆಯಡಿ ಶೇ. 67ರಷ್ಟು ಹಣ ಧೂಳು ಸ್ವಚ್ಛಗೊಳಿಸಲು ಬಳಕೆಯಾಗ್ತಿದ್ಯಂತೆ. ಹೌದು, ಈ ಗುರಿಯಿಟ್ಟುಕೊಂಡಿರುವ ಎಲ್ಲಾ ನಗರಗಳಲ್ಲಿ ಕೇವಲ ಶೇಕಡಾ 25ರಷ್ಟು ಮಾತ್ರ ಕಲುಷಿತ ಕಣಗಳ ಮೂಲವನ್ನು ತೋರಿಸುತ್ತವೆ. ಇದರ ಪರಿಣಾಮವಾಗಿ ಹೆಚ್ಚಿನ ಹಣವನ್ನು ಹೆಚ್ಚು ಅಪಾಯಕಾರಿ ಪಿಎಂ 2.5 ಮತ್ತು ಪಿಎಂ 10 ರ ಮೂಲಗಳನ್ನು ನಿರ್ಬಂಧಿಸುವ ಬದಲು ಧೂಳು ನಿರ್ವಹಣೆಗೆ ಖರ್ಚು ಮಾಡಲಾಗಿದೆ.
ವಿವಿಧ ನಗರಗಳಲ್ಲಿ ಮಾಲಿನ್ಯ ಮಟ್ಟವನ್ನು ಶೇಕಡಾ 30ರವರೆಗೆ ಕಡಿಮೆ ಮಾಡುವ ಗುರಿಯೊಂದಿಗೆ ಭಾರತವು 2019 ರಲ್ಲಿ ತನ್ನ ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಇದಕ್ಕಾಗಿ, ವಾಯು ಮಾಲಿನ್ಯದ ಮೂಲಗಳು ಮತ್ತು ಮಾಲಿನ್ಯ ಮಟ್ಟಗಳಿಗೆ ಅವುಗಳ ಕೊಡುಗೆಯನ್ನು ಗುರುತಿಸಲು ನಗರವು ಮೂಲ ಹಂಚಿಕೆ ಅಧ್ಯಯನ ಪೂರ್ಣಗೊಳಿಸಬೇಕಾಗಿದೆ.
ಇಂಧನ ಮತ್ತು ಶುದ್ಧ ಗಾಳಿಯ ಸಂಶೋಧನಾ ಕೇಂದ್ರ ನಡೆಸಿದ ವಿಶ್ಲೇಷಣೆಯು ದೇಶದ 130 ನಗರಗಳಲ್ಲಿ 50 ನಗರಗಳು ಮಾತ್ರ ಎಸ್ ಎ ಅಧ್ಯಯನಗಳನ್ನು ಮಾಡಿವೆ. ಸಾಧನೆ ಮಾಡದ ನಗರಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣ ಪೋರ್ಟಲ್ ಬಹಿರಂಗಪಡಿಸಿದ್ದು, ಕೇವಲ 40 ನಗರಗಳು ಮಾತ್ರ ಪೂರ್ಣಗೊಂಡಿವೆ ಮತ್ತು 17 ವರದಿಗಳನ್ನು ಪ್ರಕಟಿಸಿವೆ.