Under19 ವಿಶ್ವಕಪ್ ಫೈನಲ್: ಟೀಮ್ ಇಂಡಿಯಾ ಗೆಲುವಿಗೆ 254 ರನ್‌ ಟಾರ್ಗೆಟ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

Under19 ವಿಶ್ವಕಪ್ (Under-19 World Cup 2024) ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭಾರತ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 253 ರನ್ ಕಲೆಹಾಕಿದೆ. ಈ ಮೂಲಕ ಭಾರತಕ್ಕೆ254 ರನ್ ಟಾರ್ಗೆಟ್ ನೀಡಿದೆ.

ತಂಡದ ಪರ ಹ್ಯಾರಿ ಡಿಕ್ಸನ್ 42 ಹಾಗೂ ಹಗ್ ವೈಬ್ಜೆನ್ 48 ರನ್ ಸಿಡಿಸಿದರೆ, ಹರ್ಜಸ್ ಸಿಂಗ್ 55 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಹಾಗೆಯೇ ಕೆಳಕ್ರಮಾಂಕದ ಬ್ಯಾಟರ್​ಗಳ ಉಪಯುಕ್ತ ಕೊಡುಗೆಯಿಂದಾಗಿ ಆಸ್ಟ್ರೇಲಿಯಾ ತಂಡ ಸ್ಪರ್ಧಾತ್ಮಕ ಮೊತ್ತವನ್ನು ಭಾರತಕ್ಕೆ ಗುರಿಯಾಗಿ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಆರಂಭಿಕ ಸ್ಯಾಮ್ ಕಾನ್ಸ್ಟಾಸ್ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು.ಆದರೆ ಆ ಬಳಿಕ ಜೊತೆಯಾದ ಹ್ಯಾರಿ ಡಿಕ್ಸನ್ 42 ಹಾಗೂ ಹಗ್ ವೈಬ್ಜೆನ್ 48 ರನ್ ಕಲೆಹಾಕುವ ಮೂಲಕ ಅರ್ಧಶತಕದ ಜೊತೆಯಾಟವನ್ನು ನೀಡಿದರು. ಆದರೆ ಇಬ್ಬರೂ ಅರ್ಧಶತಕ ಪೂರ್ಣಗೊಳಿಸುವಲ್ಲಿ ಎಡವಿದರು.

ನಂತರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಹರ್ಜಸ್ ಸಿಂಗ್ 3 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 55 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೆಳಕ್ರಮಾಂಕದಲ್ಲಿ ತಂಡದ ಸ್ಕೋರ್ ಬೋರ್ಡ್​ ಹೆಚ್ಚಿಸುವ ಕೆಲಸ ಮಾಡಿದ ಆಲಿ ಪೀಕ್ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 46 ರನ್ ಕಲೆಹಾಕಿದರು.

ಭಾರತದ ಪರ ಬೌಲಿಂಗ್​ನಲ್ಲಿ ಮಿಂಚಿದ ರಾಜ್ ಲಿಂಬಾನಿ 10 ಓವರ್​ಗಳಲ್ಲಿ 38 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರೆ, ನಮನ್ ತಿವಾರಿ 2 ವಿಕೆಟ್ ಪಡೆದು 63 ರನ್ ಬಿಟ್ಟುಕೊಟ್ಟು ಕೊಂಚ ದುಬಾರಿ ಎನಿಸಿಕೊಂಡರು. ಉಳಿದಂತೆ ಸೌಮ್ಯ ಕುಮಾರ್ ಪಾಂಡೆ ಹಾಗೂ ಮುಶೀರ್ ಖಾನ್ ತಲಾ 1 ವಿಕೆಟ್ ಪಡೆದು, ಆಸೀಸ್ ತಂಡವನ್ನು ಬಿಗ್ ಸ್ಕೋರ್ ಕಲೆಹಾಕದಂತೆ ತಡೆದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!