ಹೊಸದಿಗಂತ ವರದಿ ಕಲಬುರಗಿ:
ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ಹಲವೆಡೆ ಕಂತೆ ಕಂತೆ ಹಣ ಅಕ್ರಮವಾಗಿ ಹರಿದಾಡುತ್ತಿದ್ದು, ದಾಖಲೆಯಿಲ್ಲದ 7.25 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಜಿಲ್ಲೆಯ ಆಳಂದ ತಾಲೂಕಿನ ಮಹಾರಾಷ್ಟ್ರ ಗಡಿಯಲ್ಲಿರುವ ಹಿರೋಳ್ಳಿ ಚೆಕ್ ಪೋಸ್ಟ್ ಹತ್ತಿರ ಪ್ಲಾಸ್ಟಿಕ್ ಚೀಲದಲ್ಲಿ ಕಾರಿನ ಡಿಕ್ಕಿಯೊಳಗೆ ಸಾಗಾಟ ಮಾಡುತ್ತಿದ್ದ,7.25 ಲಕ್ಷ ಹಣವನ್ನು ಪೋಲಿಸರು ಜಪ್ತಿ ಮಾಡಿಕೊಂಡಿದ್ದಾರೆ.
ಯಾದಗಿರಿ ಮೂಲದ ಸಾಗರ್ ಎಂಬ ವ್ಯಕ್ತಿ ದಾಖಲೆಯಿಲ್ಲದ 7.25 ಲಕ್ಷ ಹಣವನ್ನು ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ,ಹಣ ಮತ್ತು ವ್ಯಕ್ತಿಯನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ದಾಖಲೆಯಿಲ್ಲದ ಹಣವನ್ನು ಎಲ್ಲಿಂದ ಎಲ್ಲಿಗೆ, ಯಾರಿಗೆ ತಲುಪಿಸಲಾಗುತ್ತಿದೆ ಎಂಬುದರ ಬಗ್ಗೆ ತನಿಖೆ ನಡೆಸಿದ್ದು, ಮಾದನ ಹಿಪ್ಪರಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.