September 16, 2026
Wednesday, September 16, 2026
spot_img

ಮತದಾನದ ಸ್ಥಳಕ್ಕೇ ನುಗ್ಗಿ ಕಚ್ಚಾ ಬಾಂಬ್‌ ಎಸೆದು ಹೋದ ಅಪರಿಚಿತರು, ಹಲವರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವನೆ ನಡೆಯುತ್ತಿದ್ದು, ಬಂಗಾಳದಲ್ಲಿ ಕಚ್ಚಾ ಬಾಂಬ್‌ ಸ್ಫೋಟವಾಗಿದೆ.

ಮುರ್ಷಿದಾಬಾದ್‌ನ ನೌಡಾದಲ್ಲಿ ಮತದಾನ ನಡೆಯುವ ವೇಳೆ ಅಪರಿಚಿತ ವ್ಯಕ್ತಿಗಳು ಸ್ಥಳಕ್ಕೆ ನುಗ್ಗಿ ಕಚ್ಚಾ ಬಾಂಬ್‌ ಎಸೆದು ಪರಾರಿಯಾಗಿದ್ದಾರೆ. ಇದರಿಂದಾಗಿ ಹಲವರು ಗಾಯಗೊಂಡಿದ್ದಾರೆ.

ಕೆಲವು ತಿಂಗಳ ಹಿಂದಷ್ಟೇ ಜಂಗಿಪುರ ಹಾಗೂ ರಘುನಾಥಗಂಜ್‌ ಪ್ರದೇಶದ ಮಧ್ಯೆ ಗಲಾಟೆ ಆಗಿತ್ತು. ಎರಡು ಗುಂಡುಗಳ ನಡುವೆ ಘರ್ಷಣೆ ಆಗಿತ್ತು. ನಿಷೇಧಾಜ್ಞೆ ಜಾರಿಯ ನಂತರ ಮೂವತ್ತಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ಈ ಗಲಭೆಗೆ ಸಂಬಂಧಿಸಿದ ವ್ಯಕ್ತಿಗಳೇ ಕಚ್ಚಾಬಾಂಬ್‌ ಎಸೆತಕ್ಕೂ ಕಾರಣರಾಗಿರಬಹುದು.

ಬಾಂಬ್‌ ದಾಳಿಯ ನಂತರ ಮತದಾನದ ಸ್ಥಳಕ್ಕೆ ಬರಲು ಮತದಾರರು ಹೆದರುತ್ತಿದ್ದಾರೆ. ಇದೀಗ ಮುರ್ಷಿದಾಬಾದ್‌ನಲ್ಲಿ ಭದ್ರತೆ ಹೆಚ್ಚು ಮಾಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !