ಹೊಸದಿಗಂತ ವಿಜಯಪುರ:
ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಕೂಟಿ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ನಗರ ಹೊರ ಭಾಗದ ಐಒಸಿ ಪೆಟ್ರೋಲ್ ಬಂಕ್ ಬಳಿಯ ಸೊಲ್ಲಾಪುರ ಹೆದ್ದಾರಿ ಬಳಿಯಲ್ಲಿ ನಡೆದಿದೆ.
ಬಾಗಲಕೋಟೆಯ ಶಿವಶಂಕರಪ್ಪ ಆಸಂಗಿ (49) ಮೃತಪಟ್ಟ ದುರ್ಧೈವಿ.
ಶಿವಶಂಕರಪ್ಪ ಆಸಂಗಿ ಈತ ಇಲ್ಲಿನ ವಾಟರ್ ಪ್ಲಾಂಟನಲ್ಲಿ ಕೆಲಸ ಮಾಡುತ್ತಿದ್ದು, ಸ್ಕೂಟಿಯಲ್ಲಿ ತೆರಳುತ್ತಿದ್ದಾಗ, ಅಪರಿಚಿತ ವಾಹನ ಡಿಕ್ಕಿ ಹೊಡೆದು ತೀವ್ರ ಪೆಟ್ಟಾಗಿ ಅಸುನೀಗಿದ್ದಾನೆ. ಘಟನಾ ಸ್ಥಳದಿಂದ ವಾಹನ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದಾನೆ.
ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.