ಹೊಸದಿಗಂತ ವರದಿ ವಿಜಯಪುರ:
ಅಪರಿಚಿತ ವಾಹನ ಹಾಗೂ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಕೊಲ್ಹಾರ ಸಮೀಪದ ರಾಷ್ಟ್ರೀಯ ಹೆದ್ದಾರಿ 218ರ ಕೊರ್ತಿ-ಕೊಲ್ಹಾರ ಸೇತುವೆ ಮೇಲೆ ಬುಧವಾರ ನಡೆದಿದೆ.
ಮೃತಪಟ್ಟವರನ್ನು ತಾಲೂಕಿನ ತೆಲಗಿ ಗ್ರಾಮದ ಅಶೋಕ ಚಲವಾದಿ ( 36), ಮುತ್ತಪ್ಪ ಅರ್ಜುನ್ ಮಳೆಪ್ಪಗೊಳ (45) ಎಂದು ಗುರುತಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ಇನ್ನೋರ್ವ ನನ್ನು ಸದಾಶಿವ ಮಾದರ ಎನ್ನುವುದು ತಿಳಿದಿದ್ದು, ಆತನನ್ನು ಚಿಕಿತ್ಸೆಗಾಗಿ ವಿಜಯಪುರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.