ರಕ್ಷಣಾ ಇಲಾಖೆಯ ಬಜೆಟ್‌ ನಲ್ಲಿ ಸ್ವದೇಶಿ ಉದ್ಪಾದನೆಗೆ ಹೆಚ್ಚಿನ ಒತ್ತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

2022-23ನೇ ವರ್ಷದ ಕೇಂದ್ರ ಬಜೆಟ್‌ ನಲ್ಲಿ ಸರ್ಕಾರ ರಕ್ಷಣಾ ಇಲಾಖೆಗೆ ಹೆಚ್ಚಿನ ಆದ್ಯತೆ ನೀಡಿದೆ.
ರಕ್ಷಣಾ ಬಜೆಟ್‌ ನ ಶೇ.35ರಷ್ಟು ಅನುದಾನವನ್ನು ಸಂಶೋಧನೆಗೆ ಮೀಸಲಿಡುವುದಾಗಿ ಘೋಷಿಸಿದ್ದು, ಆತ್ಮ ನಿರ್ಭರದ ಕನಸು ಹೊತ್ತ ಭಾರತ, ಬಜೆಟ್‌ ನಲ್ಲಿನ ಶೇ.68ರಷ್ಟು ಮೊತ್ತವನ್ನು ಉತ್ಪಾದನೆಗೆ ಮೀಸಲಿಡಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದರು.
ಈ ಮೂಲಕ ರಕ್ಷಣಾ ಇಲಾಖೆಗೆ ಅಗತ್ಯವಿರುವ ರಕ್ಷಣಾ ಸಾಮಾಗ್ರಿಗಳ ಖರೀದಿಯನ್ನು ಸ್ಥಳೀಯವಾಗಿ ಸಿದ್ಧಗೊಳಿಸಲಾಗುತ್ತದೆ. ರಕ್ಷಣಾ ಇಲಾಖೆಯಲ್ಲಿ ಖರೀದಿ ಮತ್ತು ಸಂಶೋಧನೆಯಲ್ಲಿ ಖಾಸಗಿ ಸಹಭಾಗಿತ್ವವೂ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!