ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿಯ ಬಹುನಿರೀಕ್ಷಿತ ಕೇಂದ್ರ ಬಜೆಟ್ ಇದೇ ಭಾನುವಾರದಂದು ನಡೆಯಲಿದೆ. ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ.
ಈ ಬಾರಿಯ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಎಲ್ಲ ಕ್ಷೇತ್ರಗಳಂತೆ ವೈದ್ಯಕೀಯ ಕ್ಷೇತ್ರವೂ ಬಜೆಟ್‌ನ್ನು ಎದುರು ನೋಡುತ್ತಿದೆ. ಹೊಸ ಹೊಸ ಆಸ್ಪತ್ರೆಗಳು, ಅಡ್ವಾನ್ಸ್ ಟೆಕ್ನಾಲಜಿ ಇನ್ನಿತರ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.
ದೇಶದ ಮೊದಲ ಸ್ತರ ಮತ್ತು ಎರಡನೇ ಸ್ತರದ ನಗರಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಅಲ್ಲಿ ಆಸ್ಪತ್ರೆಗಳು ಮತ್ತು ಮೆಡಿಕಲ್ ಕಾಲೇಜುಗಳ ಸಂಖ್ಯೆ ಹೆಚ್ಚಿಸಬೇಕು. ಅದಕ್ಕೆ ತಕ್ಕುದಾಗಿ ವೈದ್ಯರು, ನರ್ಸ್ ಹಾಗು ಇತರ ಸಿಬ್ಬಂದಿಯ ನೇಮಕಾತಿಗಳೂ ಆಗಬೇಕು. ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಹೂಡಿಕೆ ಆಗಬೇಕು ಎಂದು ಈ ಉದ್ಯಮ ವಲಯ ನಿರೀಕ್ಷಿಸುತ್ತಿದೆ.
ಆರ್ ಅಂಡ್ ಡಿ ಒಳಗೊಂಡ ವೈದ್ಯಕೀಯ ತಂತ್ರಜ್ಞಾನ ಉತ್ಪಾದನೆಗೆ ಉತ್ತೇಜಿಸಲಾಗುವಂತೆ ಪಿಎಲ್ಐ ಸ್ಕೀಮ್ ಅನ್ನು ಮಾರ್ಪಡಿಸಬೇಕು ಎನ್ನುವ ಕೂಗು ಕೇಳಿಬರುತ್ತಿದೆ.
ಫಾರ್ಮಾ ಸೆಕ್ಟರ್ನಲ್ಲೂ ಪರಿವರ್ತನೆಗೆ ಕೂಗು ಕೇಳಿ ಬಂದಿದೆ. ಸದ್ಯ ಫಾರ್ಮಾ ಕ್ಷೇತ್ರದಲ್ಲಿ ಕಡಿಮೆ ಮೌಲ್ಯದ ಸರಕುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ. ಆದರೆ, ಹೆಚ್ಚು ಮೌಲ್ಯದ ಸರಕುಗಳ ಉತ್ಪಾದನೆಗೆ ಆಧ್ಯತೆ ಕೊಡುವ ರೀತಿಯಲ್ಲಿ ಬೆಳವಣಿಗೆ ಆಗಬೇಕು. ಈ ನಿಟ್ಟಿನಲ್ಲಿ 2026ರ ಬಜೆಟ್‌ನಲ್ಲಿ ಗಮನ ಹರಿಸಲಿ ಎಂದು ಫಾರ್ಮಾ ಉದ್ಯಮಿಗಳು ಮನವಿ ಮಾಡಿದ್ದಾರೆ.



