ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಪರ್ಜೊಯ್ ಚಂಡಮಾರುತದಿಂದಾಗಿ ಗುಜರಾತ್ ತತ್ತರಿಸಿದ್ದು, ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಲಿದ್ದಾರೆ.
ಕಚ್ ಮತ್ತು ಜಖೌ ಬಂದರಿಗೆ ಭೇಟಿ ನೀಡಲಿದ್ದು, ಸಿಎಂ ಭೂಪೇಂದ್ರ ಪಟೇಲ್ ಜೊತೆ ಸಭೆ ನಡೆಸಲಿದ್ದಾರೆ. ಹಾನಿ, ಪರಿಹಾರ ಹಾಗೂ ನಿರಾತ್ರಿತರಿಗೆ ವ್ಯವಸ್ಥೆಗಳ ಬಗ್ಗೆ ಸಭೆಯಲ್ಲಿ ಮಾತನಾಡಲಿದ್ದಾರೆ.