ಬೃಹತ್ ಸಾರ್ವಜನಿಕ ಸಭೆ ನಡೆಸಲು ತೆಲಂಗಾಣ ಬಿಜೆಪಿ ಸಿದ್ಧತೆ: ಅಮಿತ್‌ ಶಾ ಭಾಗಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ ಅವರ ಖಮ್ಮಂ ಜಿಲ್ಲೆ ಭೇಟಿ ಅಂತಿಮಗೊಂಡಿದೆ. ಇದೇ ತಿಂಗಳ 29ರಂದು ಅಮಿತ್ ಶಾ ಖಮ್ಮಂಗೆ ಬರಲಿದ್ದಾರೆ. ಅಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ. ಕಳೆದ ತಿಂಗಳು 15ರಂದು ಅಮಿತ್ ಶಾ ಖಮ್ಮಂಗೆ ಭೇಟಿ ನೀಡಬೇಕಿತ್ತು. ತೆಲಂಗಾಣ ಬಿಜೆಪಿ ಅಡಿಯಲ್ಲಿ ಖಮ್ಮಂನಲ್ಲಿ ಆಯೋಜಿಸಲಾಗಿದೆ ಬಹಿರಂಗ ಸಭೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಚಂಡಮಾರುತದ ಹಿನ್ನೆಲೆಯಲ್ಲಿ ಅಮಿತ್ ಶಾ ಅವರ ಖಮ್ಮಂ ಭೇಟಿಯನ್ನು ಮುಂದೂಡಲಾಗಿತ್ತು. ಇದೀಗ ಇದೇ ತಿಂಗಳ 29ಕ್ಕೆ ಅಮಿತ್ ಶಾ ಖಮ್ಮಂ ಭೇಟಿ ಅಂತಿಮಗೊಂಡಿರುವ ಹಿನ್ನೆಲೆಯಲ್ಲಿ ತೆಲಂಗಾಣ ಬಿಜೆಪಿ ಅದ್ಧೂರಿ ಸಾರ್ವಜನಿಕ ಸಭೆಗೆ ಸಿದ್ಧತೆ ನಡೆಸಿದೆ.

ಇನ್ನು ಕೆಲವೇ ತಿಂಗಳಲ್ಲಿ ತೆಲಂಗಾಣ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರು ಅಧಿಕಾರವನ್ನೇ ಗುರಿಯಾಗಿಟ್ಟುಕೊಂಡು ಕಾರ್ಯತಂತ್ರಗಳನ್ನು ಚುರುಕುಗೊಳಿಸುತ್ತಿದ್ದಾರೆ. ರಾಜ್ಯದಲ್ಲಿ ಬಿ.ಆರ್.ಎಸ್ ಪಕ್ಷವನ್ನು ಬುಡಮೇಲು ಮಾಡುವ ಶಕ್ತಿ ತಮಗಿದೆ ಎಂದು ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜನರ ಮಧ್ಯೆ ಉಳಿದುಕೊಂಡು ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪಕ್ಷದ ರಾಜ್ಯ ನಾಯಕತ್ವ ನಿರ್ಧರಿಸಿದೆ. ಕಿಶನ್ ರೆಡ್ಡಿ ನೇತೃತ್ವದಲ್ಲಿ ಬಿಜೆಪಿ ರಾಜ್ಯ ನಾಯಕರು ಚುನಾವಣೆಗೆ ಸಜ್ಜಾಗಲು ಸಿದ್ಧತೆ ನಡೆಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಮಿತ್ ಶಾ ಅವರ ಖಮ್ಮಂ ಪ್ರವಾಸವು ಬಿಜೆಪಿ ಪಡೆಗೆ ಇನ್ನಷ್ಟು ಉತ್ಸಾಹ ತುಂಬುವ ಸಾಧ್ಯತೆ ಇದೆ.

ಇದೇ ವೇಳೆ.. ಕಳೆದ ತಿಂಗಳು 15ರಂದು ಖಮ್ಮಂಗೆ ಭೇಟಿ ನೀಡಿದ ಅಮಿತ್ ಶಾ ಹಲವು ಗಣ್ಯರನ್ನು ಭೇಟಿ ಮಾಡಲು ನಿರ್ಧರಿಸಿದ್ದರು. ಅದರಲ್ಲೂ ಸಿನಿಮಾ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಬೇಕಿತ್ತು. ಆದರೆ, ಅಮಿತ್ ಶಾ ಭೇಟಿಯನ್ನು ಮುಂದೂಡಲಾಗಿದೆ. ಇದೇ ತಿಂಗಳ 29ಕ್ಕೆ ಅಮಿತ್ ಶಾ ಪ್ರವಾಸ ಮುಗಿಯುತ್ತಿದ್ದಂತೆ ಈ ಬಾರಿ ಚಿತ್ರರಂಗದ ಗಣ್ಯರನ್ನಾದರೂ ಅಮಿತ್ ಶಾ ಭೇಟಿ ಮಾಡುತ್ತಾರಾ? ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!