ಆಂಧ್ರಪ್ರದೇಶದ ಮೇಲೆ ಬಿಜೆಪಿ ಫೋಕಸ್:‌ ಅಮಿತ್ ಶಾ ವಿಶಾಖಪಟ್ಟಣ ಪರ್ಯಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಿಜೆಪಿಯ ಕೇಂದ್ರ ನಾಯಕತ್ವವು ಆಂಧ್ರಪ್ರದೇಶದತ್ತ ಗಮನಹರಿಸಿದೆ. 2024ರ ವಿಧಾನಸಭೆ ಚುನಾವಣೆ ವೇಳೆಗೆ ಪ್ರಬಲ ಪಕ್ಷವಾಗಲು ಪಕ್ಷದ ಕೇಂದ್ರ ನಾಯಕರು ತಮ್ಮ ಕಾರ್ಯತಂತ್ರಗಳನ್ನು ಚುರುಕುಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಶನಿವಾರ ಎಪಿಗೆ ಭೇಟಿ ನೀಡಿದ್ದರು. ಶ್ರೀಕಾಳಹಸ್ತಿಯಲ್ಲಿ ನಡೆದ ಬೃಹತ್ ಬಯಲು ಸಭೆಯಲ್ಲಿ ಪಾಲ್ಗೊಂಡು ಬಿಜೆಪಿಯ ಪದಾಧಿಕಾರಿಗಳನ್ನುದ್ದೇಶಿಸಿ ಮಾತನಾಡಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಮರುದಿನ (ಭಾನುವಾರ) ಸಂಜೆ ವಿಶಾಖಪಟ್ಟಣದ ರೈಲ್ವೇ ಫುಟ್ಬಾಲ್ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಸಂಜೆ 6 ಗಂಟೆಗೆ ಚೆನ್ನೈನಿಂದ ವಿಶೇಷ ವಿಮಾನದಲ್ಲಿ ವಿಶಾಖಪಟ್ಟಣಂ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.

ವಿಮಾನ ನಿಲ್ದಾಣದಿಂದ ನೇರವಾಗಿ ರಸ್ತೆಯ ಮೂಲಕ 6.10 ಗಂಟೆಗೆ ರೈಲ್ವೆ ಮೈದಾನವನ್ನು ತಲುಪಲಿದ್ದಾರೆ. ಅಲ್ಲಿಂದ 7.15ಕ್ಕೆ ಹೊರಟು ನಗರದ ಬಂದರು ಅತಿಥಿಗೃಹಕ್ಕೆ ತೆರಳಿ ಬಳಿಕ ಸಾಗರಮಾಲಾ ಸಭಾಂಗಣದಲ್ಲಿ ಬಿ.ಜೆ.ಪಿ ಮುಖಂಡರ ಜತೆ ಸಭೆ ನಡೆಯಲಿದೆ. ರಾತ್ರಿ 9.05ಕ್ಕೆ ರಸ್ತೆ ಮೂಲಕ ಹೊರಟು ರಾತ್ರಿ 9.25ಕ್ಕೆ ವಿಶಾಖಪಟ್ಟಣಂ ವಿಮಾನ ನಿಲ್ದಾಣ ತಲುಪಲಿದ್ದಾರೆ. ಅಲ್ಲಿಂದ ಬೆಳಗ್ಗೆ 9.30ಕ್ಕೆ ವಿಶೇಷ ವಿಮಾನದಲ್ಲಿ ಅಮಿತ್ ಶಾ ದೆಹಲಿ ತಲುಪಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!