ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅವರ ಮೊಮ್ಮಗಳನ್ನು ಆಕೆಯ ಪತಿಯೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬಿಹಾರದ ಅಟಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಟೆಟುವಾ ಗ್ರಾಮದಲ್ಲಿ ಬುಧವಾರ ನಡೆದಿದೆ.
ಅಟಾರಿ ಬ್ಲಾಕ್‌ನಲ್ಲಿ ವಿಕಾಸ್ ಮಿತ್ರರಾಗಿ ಕೆಲಸ ಮಾಡುತ್ತಿದ್ದ ಸುಷ್ಮಾ ದೇವಿ (32) ಅವರನ್ನು ಆಕೆಯ ಪತಿ ರಮೇಶ್ ಸಿಂಗ್ ಕೊಲೆ ಮಾಡಿ ತಲೆಮರೆಸಿಕೊಂಡಿದ್ದಾನೆ.
ಬುಧವಾರ ಮನೆಗೆ ಬಂದ ರಮೇಶ್, ಪತ್ನಿ ಸುಷ್ಮಾ ಅವರನ್ನು ಬಲವಂತವಾಗಿ ಕೋಣೆಗೆ ಎಳೆದೊಯ್ದು ಲಾಕ್ ಮಾಡಿ, ಬಳಿಕ ಆಕೆಯ ಎದೆಗೆ ಗುಂಡು ಹಾರಿಸಿದ್ದಾನೆ. ಇದರಿಂದ ಸುಷ್ಮಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಯಾ ಎಸ್‌ಎಸ್‌ಪಿ ಆನಂದ್ ಕುಮಾರ್ ಮಾತನಾಡಿ, ಅಟಾರಿ ಪೊಲೀಸ್ ಠಾಣೆಯ ಟೆಟುವಾ ಗ್ರಾಮದಲ್ಲಿ ಮಹಿಳೆಯನ್ನು ಆಕೆಯ ಪತಿ ಗುಂಡಿಕ್ಕಿ ಕೊಂದಿದ್ದಾನೆ. ಆರೋಪಿ ಪತಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದರು.
ಸುಷ್ಮಾ, ಸತ್ಯೇಂದ್ರ ಕುಮಾರ್ ಪನ್ನಾ ಅವರ ಸೋದರ ಸಂಬಂಧಿ ಕೃತ್ ಮಾಂಝಿ ಅವರ ಮಗಳಾಗಿದ್ದಾರೆ.