January21, 2026
Wednesday, January 21, 2026
spot_img

ಭಾರತ ಸತ್ತ ಆರ್ಥಿಕತೆ ಎಂದ ಟ್ರಂಪ್ ಗೆ ತಿರುಗೇಟು ನೀಡಿದ ಕೇಂದ್ರ ಸಚಿವ ಪೀಯುಶ್ ಗೋಯಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತವನ್ನು ಸತ್ತ ಆರ್ಥಿಕತೆ ಎಂದು ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಕೇಂದ್ರ ಸಚಿವ ಪೀಯುಶ್ ಗೋಯಲ್ ತಿರುಗೇಟು ನೀಡಿದ್ದಾರೆ.

ಭಾರತದ ಆರ್ಥಿಕತೆ ಎಷ್ಟು ಜೀವಂತವಾಗಿದೆ, ಎಷ್ಟು ವೇಗವಾಗಿ ಸಾಗುತ್ತಿದೆ ಎನ್ನುವುದನ್ನು ಹಾಗು ಇದಕ್ಕೆ ಹೋಲಿಸಿದರೆ ಅಮೆರಿಕದ ಆರ್ಥಿಕತೆ ಎಷ್ಟು ಮಂದದಲ್ಲಿ ಸಾಗುತ್ತಿದೆ ಎನ್ನುವುದನ್ನು ಐಎಂಎಫ್​ನ ದತ್ತಾಂಶದ ಉಲ್ಲೇಖಿಸಿ ಉತ್ತರಿಸಿದ್ದಾರೆ.

‘ಭಾರತದ ಆರ್ಥಿಕತೆ ಹುಲುಸಾಗಿ ಬೆಳೆಯುತ್ತಿದೆ’ ಎಂದ ವಾಣಿಜ್ಯ ಸಚಿವರು, ಐಎಂಎಫ್​ನ ಜಾಗತಿಕ ಆರ್ಥಿಕ ಬೆಳವಣಿಗೆಯ ಅಂದಾಜು ಮಾಡಲಾಗಿರುವ ದತ್ತಾಂಶವನ್ನೂ ಹಂಚಿಕೊಂಡಿದ್ದಾರೆ.

Imageಆ ದತ್ತಾಂಶದಲ್ಲಿ 2026ರವರೆಗಿನ ಆರ್ಥಿಕ ಮುನ್ನೋಟ ಅಥವಾ ಅಂದಾಜನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ ಮಾಡಿದೆ. ಅದರ ಪ್ರಕಾರ 2026ರಲ್ಲಿ ಭಾರತದ ಜಿಡಿಪಿ ಶೇ. 6.4ರಷ್ಟು ಬೆಳೆಯಬಹುದು ಎಂದಿದೆ. ವಿಶ್ವದ ಯಾವುದೇ ಇತರ ಪ್ರಮುಖ ಆರ್ಥಿಕತೆಯ ದೇಶಗಳು ಈ ವೇಗದಲ್ಲಿ ಬೆಳೆಯುವ ಸಾಧ್ಯತೆ ಇಲ್ಲ.ಚೀನಾ ಶೇ. 4.2ರ ಬೆಳವಣಿಗೆಯೊಂದಿಗೆ ಭಾರತದ ಸಮೀಪದಲ್ಲೇ ಇದೆ. ಏಷ್ಯಾದ ಉದಯೋನ್ಮುಖ ಆರ್ಥಿಕತೆಗಳು ಶೇ. 5ರ ಸಮೀಪದಷ್ಟು ಬೆಳವಣಿಗೆ ಹೊಂದಬಹುದು ಎಂದು ಐಎಂಎಫ್ ಅಂದಾಜು ಮಾಡಿದೆ.

Must Read