ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಇಂದು ಮಧ್ಯ ಕಾಶ್ಮೀರದ ಗಂದೇರ್ಬಲ್ ಜಿಲ್ಲೆಯ ಬಾಲ್ಟಾಲ್ ಮೂಲ ಶಿಬಿರದಿಂದ ಅಮರನಾಥ ಪವಿತ್ರ ಗುಹೆಗೆ ಭಕ್ತರ ಜೊತೆ ಪಾದಯಾತ್ರೆಯನ್ನು ಕೈಗೊಂಡರು.
ಅಮರನಾಥ ಗುಹೆಗೆ ತೆರಳಿ ಹಿಮಲಿಂಗದ ದರ್ಶನ ಪಡೆದರು. ದುರ್ಗಮವಾದ ಹಾದಿಯಲ್ಲಿ ಕಾಲ್ನಡಿಗೆಯಲ್ಲೇ ಸಚಿವೆ ಶೋಭಾ ಕರಂದ್ಲಾಜೆ ಯಾತೆ ಮುಗಿಸಿದರು. ಪಾದಯಾತ್ರೆಗೂ ಮೊದಲು ಶೋಭಾ ಕರಂದ್ಲಾಜೆ ಇಂದು ಮುಂಜಾನೆ ಬಾಲ್ಟಾಲ್ ಮೂಲ ಶಿಬಿರಕ್ಕೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿ, ಭಕ್ತರೊಂದಿಗೆ ಸಂವಹನ ನಡೆಸಿದರು.
ಇಂದು, ನಾವೆಲ್ಲರೂ ಭೋಲೆನಾಥನ ದರ್ಶನ ಪಡೆಯಲಿದ್ದೇವೆ. ಇದು ಅದ್ಭುತವೆನಿಸುತ್ತದೆ. ದೇವರು ನಮ್ಮೆಲ್ಲರನ್ನೂ ಆಶೀರ್ವದಿಸಲಿ. ಇಲ್ಲಿನ ವಾತಾವರಣ ಬಹಳ ಆಹ್ಲಾದಕರವಾಗಿದೆ ಎಂದಿದ್ದಾರೆ.