ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಇಂದು ಮನ್ ಕಿ ಬಾತ್ನ 120 ನೇ ಸಂಚಿಕೆಯಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಹೊಸ ವರ್ಷವನ್ನು ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಲ್ಲಿ ವಿಶಿಷ್ಟ ಹೆಸರುಗಳೊಂದಿಗೆ ಬರಮಾಡಿಕೊಳ್ಳುತ್ತಾರೆ. ಇದನ್ನೇ ವಿವಿಧತೆಯಲ್ಲಿ ಏಕತೆ ಎನ್ನುತ್ತೇವೆ ಎನ್ನುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ.
ಮಕ್ಕಳಿಗೆ ಬೇಸಿಗೆ ರಜೆ ಶುರುವಾಗುತ್ತಿದೆ. ಹೊಸ ಹವ್ಯಾಸವನ್ನು ಅಳವಡಿಸಿಕೊಳ್ಳುವ ಜೊತೆಗೆ ತಮ್ಮ ಕೌಶಲ್ಯಗಳನ್ನು ಮತ್ತಷ್ಟು ಬೆಳೆಸಿಕೊಳ್ಳುವ ಸಮಯ ಇದು. ಯಾವುದೇ ಸಂಸ್ಥೆ, ಶಾಲೆ, ಸಾಮಾಜಿಕ ಸಂಸ್ಥೆ ಅಥವಾ ಕೇಂದ್ರಗಳು ಬೇಸಿಗೆ ಚಟುವಟಿಕೆಗಳನ್ನು ಆಯೋಜಿಸುತ್ತಿದ್ದರೆ ಅದನ್ನು #MYHOLIDAYS ನೊಂದಿಗೆ ಹಂಚಿಕೊಳ್ಳಿ ಎಂದು ಮೋದಿ ಹೇಳಿದ್ದಾರೆ.
ಮಳೆ ಹನಿಗಳನ್ನು ಸಂರಕ್ಷಿಸುವ ಮೂಲಕ ನಾವು ಬಹಳಷ್ಟು ನೀರನ್ನು ವ್ಯರ್ಥ ಮಾಡುವುದನ್ನು ತಪ್ಪಿಸಬಹುದು ಎಂದು ಜಲಸಂರಕ್ಷಣೆ ಕುರಿತು ಮೋದಿ ಸಲಹೆ ನೀಡಿದ್ದಾರೆ.