ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾರೇ ಆಗಲಿ ತಿರುಪತಿಗೆ ತೆರಳಿ ವಾಪಾಸಾದಾಗ ಕುಂಕುಮ ಪ್ರಸಾದದ ನಂತರ ಎಲ್ಲರೂ ಕೇಳೋದು ತಿರುಪತಿ ಲಡ್ಡು ಎಲ್ಲಿ? ಹೌದು, ಅತ್ಯತದ್ಭುತ ರುಚಿ ಹೊಂದಿದ ಈ ಲಡ್ಡುಗೆ ಬರೋಬ್ಬರಿ 309 ವರ್ಷ.
ಹೌದು, ಮೊದಲ ಬಾರಿಗೆ 1715ರ ಆಗಸ್ಟ್ 2 ರಂದು ತಿರುಪತಿ ಪ್ರಸಾದ ಲಡ್ಡು ತಯಾರಿಕೆ ಮಾಡಲಾಗಿತ್ತು. ಈ ಲಡ್ಡು ವಿಶ್ವಪ್ರಸಿದ್ಧಿ ಪಡೆಯಲು ಹೆಚ್ಚು ದಿನಗಳು ಬೇಕಾಗಿಲ್ಲ. ತಿರುಪತಿ ಎಂಬ ಹೆಸರಿನ ಜೊತೆಗೆ ಲಡ್ಡು ಸೇರಿಹೋಗಿದ್ದು, ಜನರು ಲಡ್ಡು ಇಷ್ಟಪಟ್ಟು ಸೇವನೆ ಮಾಡುತ್ತಾರೆ.
ವಿಶ್ವದ ಶ್ರೀಮಂತ ದೇವಸ್ಥಾನ ಎನ್ನುವ ಹೆಗ್ಗಳಿಕೆಗೆ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಪಾತ್ರವಾಗಿದ್ದು ವರ್ಷದಿಂದ ವರ್ಷಕ್ಕೆ ಈ ದೇವಸ್ಥಾನದ ಆದಾಯ ಹೆಚ್ಚಾಗುತ್ತಿದೆ. ಲಡ್ಡು ಪ್ರಸಾದದಿಂದ ಕೂಡ ದೇಗುಲಕ್ಕೆ ಆದಾಯ ಹೆಚ್ಚಾಗುತ್ತಿದೆ. ತುಪ್ಪ, ಏಲಕ್ಕಿ, ಬೂಂದಿ, ದ್ರಾಕ್ಷಿ, ಗೋಡಂಬಿ ಹೇರಳವಾಗಿ ಹಾಕಿ ಲಡ್ಡು ತಯಾರಿಸಲಾಗುತ್ತದೆ.
ಲಡ್ಡು ನೀಡಲು ಪ್ರತ್ಯೇಕ ಕೌಂಟರ್ ಇದೆ, ನಂದಿನಿ ತುಪ್ಪ ಬಳಸಿ ರುಚಿಯಾದ ಲಡ್ಡು ತಯಾರಿಸಲಾಗುತ್ತದೆ.ಈವರೆಗೂ ಲಡ್ಡು ರುಚಿ ಸವಿಯದವರಿಲ್ಲ. ಅಕಸ್ಮಾತ್ ತಿಂದಿಲ್ಲ ಎಂದರೂ ಇಂದೇ ಟ್ರೈ ಮಾಡಿ.