ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೋಟಾರು ಅಪಘಾತ ಕ್ಲೈಮ್ಸ್ ಟ್ರಿಬ್ಯೂನಲ್ ನಲ್ಲಿ ನಕಲಿ ಕ್ಲೈಮ್ಗಳನ್ನು ಸಲ್ಲಿಸಿದ ಆರೋಪದ ಮೇಲೆ 30 ವಕೀಲರ ಪರವಾನಗಿಯನ್ನು ರದ್ದುಗೊಳಿಸಲು ಉತ್ತರಪ್ರದೇಶ ಬಾರ್ ಕೌನ್ಸಿಲ್ ನಿರ್ಧರಿಸಿದೆ.
ಪೊಲೀಸರ ವಿಶೇಷ ತನಿಖಾ ತಂಡ (ಎಸ್ಐಟಿ) ವರದಿ ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಂಚನೆಯಲ್ಲಿ ವಕೀಲರ ಜತೆಗೆ ಕೆಲ ಪೊಲೀಸರೂ ಭಾಗಿಯಾಗಿದ್ದು ಇನ್ನೂ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಮೀರತ್, ಬರೇಲಿ ಮತ್ತು ಶಹಜಹಾನ್ಪುರದಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ.
ಅಕ್ಟೋಬರ್ 7, 2015 ರಂದು ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶದಂತೆ ಮೋಟಾರು ಅಪಘಾತ ಕ್ಲೈಮ್ಸ್ ಟ್ರಿಬ್ಯೂನಲ್ ಮತ್ತು ವರ್ಕ್ಮೆನ್ ಕಾಂಪೆನ್ಸೇಶನ್ ಆಕ್ಟ್ ಅಡಿಯಲ್ಲಿ ನಕಲಿ ಕ್ಲೈಮ್ಗಳನ್ನು ಸಲ್ಲಿಸುವ ಮೂಲಕ ವಕೀಲರು ವಿಮಾ ಕಂಪನಿಗಳಿಗೆ ಹಲವಾರು ಕೋಟಿಗಳಷ್ಟು ನಷ್ಟವನ್ನು ಉಂಟುಮಾಡಿದ್ದಾರೆ ಎನ್ನಲಾಗಿದೆ.