ಕಲಬುರಗಿಯಲ್ಲಿ ಯುಪಿ ಸಿಎಂ ಯೋಗಿ ಆಧಿತ್ಯನಾಥ್ ಗೆ ಸಿಕ್ಕಿತು ಬುಲ್ಡೋಜರ್ ಸ್ವಾಗತ!

ಹೊಸದಿಗಂತ ವರದಿ,ಕಲಬುರಗಿ:

ಭಾನುವಾರ ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಭಾಷ್ ಗುತ್ತೇದಾರ್ ಪರ ಪ್ರಚಾರಕ್ಕಾಗಿ ಆಗಮಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ಅವರಿಗೆ ಕಾಯ೯ಕ್ರಮದ ಸ್ಥಳದಲ್ಲಿ 10 ಬುಲ್ಡೋಜರ್ ನಿಲ್ಲಿಸುವ ಮೂಲಕ ಅದ್ಧೂರಿಯಾಗಿ ಸ್ವಾಗತ ಮಾಡಲಾಯಿತು.

ಬುಲ್ಡೋಜರ್ ಜೊತೆಗೆ ಒಂದು ಭಗವಾ ಧ್ವಜ ಹಾಗೂ ಸ್ಥಳೀಯ ಶಾಸಕ ಸುಭಾಷ್ ಗುತ್ತೇದಾರ್ ಹಾಗೂ ಯೋಗಿ ಆಧಿತ್ಯನಾಥ್ ಅವರ ಭಾವಚಿತ್ರ ಇರುವ ಬ್ಯಾನರ ಅಳವಡಿಸಲಾಗಿತ್ತು. ಹೆಲಿಕಾಪ್ಟರ್ ಒಳಗಡೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಜೊತೆಗಾರರಿಗೆ ಖುದ್ದಾಗಿ ಬುಲ್ಡೋಜರ್ ನಿಲ್ಲಿಸಿರುವ ಬಗ್ಗೆ ಯುಪಿ ಸಿಎಂ ಯೋಗಿ ಖುದ್ದಾಗಿ ಈ ವಿಷಯವನ್ನು ಹಂಚಿಕೊಂಡಿದ್ದು,ಆ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!