ಪಾಕ್ ಏಜೆಂಟ್ ‘ನೇಹಾ’ಗೆ ರಕ್ಷಣಾ ಮಾಹಿತಿ ಸೋರಿಕೆ: ಯುಪಿ ವ್ಯಕ್ತಿಯ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್‌ (ISI) ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಫಿರೋಜಾಬಾದ್‌ನ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ.

ಬಂಧಿತ ರವೀಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ‌ಫಿರೋಜಾಬಾದ್‌ನ ಹಜರತ್‌ಪುರ ಮೂಲದ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಈತ ಗಗನಯಾನ ಬಾಹ್ಯಾಕಾಶ ಯೋಜನೆ ಮತ್ತು ಮಿಲಿಟರಿ ಲ್ಯಾಜಿಸ್ಟಿಜ್ಸ್‌, ಡ್ರೋನ್ ಪ್ರಯೋಗಗಳ ಮಾಹಿತಿ ಸೇರಿದಂತೆ ಗೌಪ್ತ ಮಾಹಿತಿಯನ್ನ ಪಾಕಿಸ್ತಾನದ ಐಎಸ್‌ಐ ಜೊತೆಗೆ ಹಂಚಿಕೊಂಡಿದ್ದಾನೆ ಎಂದು ಯುಪಿ ಎಟಿಎಸ್ (UP ATS) ಮುಖ್ಯಸ್ಥ ನೀಲಬ್ಜಾ ಚೌಧರಿ ತಿಳಿಸಿದ್ದಾರೆ.

ರವೀಂದ್ರ ಕುಮಾರ್, ಐಎಸ್‌ಐಗಾಗಿ ಕೆಲಸ ಮಾಡುತ್ತಿರುವ ನೇಹಾ ಶರ್ಮಾ ಎಂಬ ಕೋಡ್ ನೇಮ್‌ಗೆ ಡೇಟಾವನ್ನು ಸೋರಿಕೆ ಮಾಡಿದ್ದಾರೆ ಎಂದು ಯುಪಿ ಎಟಿಎಸ್ ಮುಖ್ಯಸ್ಥರು ತಿಳಿಸಿದ್ದಾರೆ.

ರವೀಂದ್ರ ಕುಮಾರ್ ಫಿರೋಜಾಬಾದ್‌ನ ಹಜ್ರತ್‌ಪುರ್‌ನಲ್ಲಿರುವ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಚಾರ್ಜ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಈ ಫ್ಯಾಕ್ಟರಿಯು ಭಾರತೀಯ ಸೇನೆಗೆ ಡ್ರೋನ್‌ಗಳು, ಪ್ಯಾರಾಚೂಟ್‌ಗಳು ಮತ್ತು ಇತರ ಪ್ರಮುಖ ಸಾಮಗ್ರಿಗಳನ್ನು ತಯಾರಿಸುವ ಜವಾಬ್ದಾರಿಯನ್ನು ಹೊಂದಿದೆ.

ತನಿಖೆಯ ಪ್ರಕಾರ, ಬಂಧಿತ ಆರೋಪಿ, ಫೇಸ್‌ಬುಕ್ ಮೂಲಕ ನೇಹಾ ಶರ್ಮಾ ಎಂಬ ಮಹಿಳೆಯೊಂದಿಗೆ ಸಂಪರ್ಕಕ್ಕೆ ಬಂದಿದ್ದಾನೆ. ಈ ಸಂಪರ್ಕವು 2024ರಲ್ಲಿ ಆರಂಭವಾಗಿದ್ದು, ಬಳಿಕ ಇದು ಒಂದು ಹನಿ ಟ್ರ್ಯಾಪ್” (Honey Trap) ಆಗಿ ಪರಿಣಮಿಸಿದೆ. ನೇಹಾ ಶರ್ಮಾ ಎಂಬುವವಳು ಪಾಕಿಸ್ತಾನದ ಐಎಸ್‌ಐಗೆ ಕೆಲಸ ಮಾಡುತ್ತಿದ್ದ ಏಜೆಂಟ್ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!