ಹೊಸದಿಗಂತ ಡಿಜಿಟಲ್ ಡೆಸ್ಕ್:
ವರದಕ್ಷಿಣೆ ದುರಾಸೆಯಿಂದ ವರನೊಬ್ಬ ಮಾಡಿದ ಕೃತ್ಯದಿಂದ ವಧುವಿನ ಮನೆಯವರು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ. ಉತ್ತರ ಪ್ರದೇಶದ ಆಗ್ರಾದಲ್ಲಿ ತ್ರಿವಳಿ ತಲಾಖ್ ಘಟನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಮದುವೆಯಾದ ಎರಡು ಗಂಟೆಯ ನಂತರ ವರದಕ್ಷಿಣೆಯಾಗಿ ಕಾರು ನೀಡದ ಕಾರಣ ವರನು ವಧುವಿಗೆ ತ್ರಿವಳಿ ತಲಾಖ್ ನೀಡಿದ್ದಾನೆ. ಈ ಸಂಬಂಧ ವಧುವಿನ ಸಹೋದರ ತಾಜ್‌ಗಂಜ್ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ದುರಾಸೆಯ ಪ್ರಕರಣವನ್ನು ದಾಖಲಿಸಿದ್ದಾರೆ.
ಎಫ್‌ಐಆರ್ ಪ್ರಕಾರ, ಇಬ್ಬರು ಸಹೋದರಿಯರಾದ ಡಾಲಿ ಮತ್ತು ಗೌರಿಯ ವಿವಾಹವು ಆಗ್ರಾದ ಫತೇಹಾಬಾದ್ ರಸ್ತೆಯಲ್ಲಿರುವ ಮದುವೆ ಮಂಟಪದಲ್ಲಿ ಒಂದೇ ದಿನ ನಡೆಯಿತು. ಹಿರಿಯ ಮಗಳು ಗೌರಿಯು ಅಮಾನ್ ಜೊತೆ ವಿಧಿವಿಧಾನಗಳ ಪ್ರಕಾರ ಕುಟುಂಬಸ್ಥರು ಆಕೆಯನ್ನು ಬೀಳ್ಕೊಟ್ಟರು. ಎರಡನೇ ಮಗಳು ಡಾಲಿ, ಆಸಿಫ್ ಅವರನ್ನು ಮದುವೆಯಾಗಿದ್ದರು. ಮದುವೆಯ ನಂತರ.. ಆಸಿಫ್, ಅವರ ಕುಟುಂಬ ಸದಸ್ಯರು ವರದಕ್ಷಿಣೆಯಾಘಿ ಕಾರಿಗೆ ಬೇಡಿಕೆ ಇಡಲಾರಂಭಿಸಿದರು. ಏಕಾಏಕಿ ಕಾರು ಬೇಕೆಂದು ಕೇಳಿದ್ದಕ್ಕೆ ವಧುವಿನ ಕುಟುಂಬಸ್ಥರು ಗಾಬರಿಗೊಂಡಿದ್ದಾರೆ.
ಸ್ವಲ್ಪ ಸಮಯ ತೆಗೆದುಕೊಂಡು ಕಾರು ನೀಡುವುದಾಗಿ ಭರವಸೆ ನೀಡಿದರೂ ವರನ ಮನೆಯವರು ಸ್ಥಳದಲ್ಲೇ ಕಾರು ನೀಡುವಂತೆ ಅಥವಾ 5 ಲಕ್ಷ ರೂ. ಕೊಡುವಂತೆ ಬೇಡಿಕೆ ಇಟ್ಟರು. ವಧುವಿನ ಮನೆಯವರು ವರನ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರೂ ಫಲಿತಾಂಶ ಮಾತ್ರ ಶೂನ್ಯ. ಅಷ್ಟೇ ಅಲ್ಲದೆ ಸ್ಥಲದಲ್ಲೇ ಮದುಮಗ ನವ ವಧುವಿಗೆ ತ್ರಿವಳಿ ತಲಾಖ್ ಹೇಳಿ ಮದುವೆ ಮನೆಯಿಂದ ನಿರ್ಗಮಿಸಿದ್ದಾನೆ. ಇದರಿಂದ ವಧುವಿನ ಮನೆಯವರು ತೀವ್ರ ನೊಂದು ಆಸಿಫ್ ಮತ್ತು ಇತರ ಆರು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.