ಏಪ್ರಿಲ್ 1 ರಿಂದ ಯುಪಿಐ ಮಾಡ್ತಿದೆ ದೊಡ್ಡ ಬದಲಾವಣೆ: ಇನ್ಮುಂದೆ ಎಲ್ಲ ನಂಬರ್​ಗಳಿಂದ ಹಣ ಕಳಿಸೊಕ್ಕಾಗಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆಯ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಆದರೆ, ಆರ್ಥಿಕ ವಂಚನೆಗಳು ಮತ್ತು ಸೈಬರ್ ಅಪರಾಧಗಳ ಸಂಖ್ಯೆಯೂ ಏರಿಕೆಯಾಗುತ್ತಿದ್ದು, ಇದನ್ನು ತಡೆಯಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ.

ಎಪ್ರಿಲ್ 1ರಿಂದ, ಯುಪಿಐ ಪಾವತಿ ನಿಯಮಗಳಲ್ಲಿ ದೊಡ್ಡ ಬದಲಾವಣೆ ಮಾಡಲಾಗುತ್ತಿದೆ, ಇದರಿಂದ ಅನಗತ್ಯ ಸಮಸ್ಯೆಗಳನ್ನು ತಪ್ಪಿಸಬಹುದು. ಈ ಹೊಸ ನಿಯಮಗಳು ಯಾವುವು? ಮತ್ತು ನೀವು ಏನನ್ನು ಗಮನಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ!

ಫೋನ್ ನಂಬರ್ ಚೇಂಜ್
ನೀವು ಫೋನ್ ನಂಬರ್ ಚೇಂಜ್ ಮಾಡಿದ್ದರೆ, ಈ ಹೊಸ ನಂಬರ್ ಕುರಿತು ಬ್ಯಾಂಕ್​ಗೆ ಅಪ್‌ಡೇಟ್ ಮಾಡಿಲ್ಲ ಎಂದರೆ ಸಂಕಷ್ಟ ಎದುರಾಗಲಿದೆ. ಇಂತಹ ನಂಬರ್‌ಗಳಿಂದ ಯುಪಿಐ ಟ್ರಾನ್ಸಾಕ್ಷನ್ ಬಂದ್ ಆಗುತ್ತಿದೆ. ಹೊಸ ನಂಬರ್ ಅಥವಾ ನಂಬರ್ ಬದಲಾವಣೆಯನ್ನು ಬ್ಯಾಂಕ್‌ನಲ್ಲಿ ಅಪ್‌ಡೇಟ್ ಮಾಡಿಕೊಳ್ಳಬೇಕು.

ರೀಚಾರ್ಜ್ ಮಾಡದಿದ್ದರೆ
ತುಂಬಾ ದಿನ ಮೊಬೈಲ್ ಫೋನ್ ರೀಚಾರ್ಜ್ ಮಾಡಿಲ್ಲ ಅಂದ್ರೆ ಅದು ಬಂದ್ ಆಗುತ್ತೆ. ಅಂತಹ ನಂಬರ್​ಗಳನ್ನು ಹ್ಯಾಕ್ ಮಾಡೋದು ಸುಲಭ. ಹೀಗಾಗಿ ಇವುಗಳಿಂದ ಎದುರಾಗುವ ಆರ್ಥಿಕ ವಂಚನೆ, ಸೈಬರ್ ಕ್ರೈಂ ತಪ್ಪಿಸಲು ಇದೀಗ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ.

ಯುಪಿಐ ಟ್ರಾನ್ಸಾಕ್ಷನ್ ಬಂದ್ ಮಾಡಿದ್ದರೆ, ಬ್ಯಾಂಕ್​ನಿಂದ ನೋಟಿಫಿಕೇಶನ್ ಬರುತ್ತೆ. ಬ್ಯಾಂಕ್​ನಿಂದ ನೋಟಿಫಿಕೇಶನ್ ಅಥವಾ ಮೆಸೇಜ್ ಬಂದ ತಕ್ಷಣ, ಆ ನಂಬರ್ ಬಗ್ಗೆ ಬ್ಯಾಂಕ್​ನಲ್ಲಿ ಅಪ್ಡೇಟ್ ಮಾಡ್ಬೇಕು.ಯುಪಿಐ ಐಡಿ ಇರೋ ಫೋನ್ ನಂಬರ್ ತುಂಬಾ ದಿನದಿಂದ ಬಳಕೆ ಮಾಡಿಲ್ಲ ಎಂದರೆ ಅದರಿಂದ ಮತ್ತೆ ಫೋನ್ ಅಥವಾ ಮೆಸೆಜ್ ಕಳುಹಿಸಿ ಸಕ್ರಿಯವಾಗಿಡಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!