ಹೊಸದಿಗಂತ ವರದಿ,ಮುಂಡಗೋಡ:
ಪಿತ್ರಾರ್ಜೀತ ಆಸ್ತಿಯನ್ನು ಹಂಚಿಕೊಳ್ಳುವ ಉದ್ದೇಶದಿಂದ ಕೋರ್ಟ್ ನಲ್ಲಿ ದಾವೆ ಮಾಡಿದ್ದನ್ನೆ ಮನಸ್ಸಿನಲ್ಲಿಟ್ಟುಕೊಂಡು ತಮ್ಮಂದಿರಿಬ್ಬರು ಅಣ್ಣನನ್ನು ತೋಟದಲ್ಲಿ ಕಂದಲಿಯಿಂದ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಲ್ಲೆಗೆ ಒಳಗಾದ ವ್ಯಕ್ತಿಯನ್ನು ಈಶ್ವರ ರಾಮಾ ನಾಯ್ಕ ಆಗಿದ್ದಾನೆ. ಹಲ್ಲೆ ಮಾಡಿದ ಆರೋಪಿತರನ್ನು ಅಶೋಕ್ ರಾಮಾ ನಾಯ್ಕ ಮತ್ತು ರಾಜೇಶ ರಾಮ ನಾಯ್ಕ ಎಂದು ಗುರುತಿಸಲಾಗಿದೆ.
ಹಲ್ಲೆಗೆ ಒಳಗಾದ ವ್ಯಕ್ತಿ ಈಶ್ವರ ನಾಯ್ಕ ತಮ್ಮ ಪಿತ್ರಾರ್ಜೀತ ಆಸ್ತಿಯನ್ನು ಹಂಚಿಕೊಳ್ಳುವ ಉದೇಶದಿಂದ ಸಿದ್ದಾಪೂರ ನ್ಯಾಯಾಲಯದಲ್ಲಿ ದಾವೆ ಮಾಡಿದ್ದರು. ನಮ್ಮ ಆಸ್ತಿಯನ್ನು ನಾವೆ ಹಂಚಿಕೊಳ್ಳಬಹುದು ಅದನ್ನು ಬಿಟ್ಟು ನ್ಯಾಯಾಲಯದಲ್ಲಿ ದಾವೆ ಹಾಕಿ ನಮ್ಮ ಮರ್ಯಾದೆ ತೆಗೆದಿದ್ದಿಯಾ ಹಾಗೂ ನಮ್ಮನ್ನು ನ್ಯಾಯಾಲಯಕ್ಕೆ ಓಡಾಡುವಂತೆ ಮಾಡಿದ್ದಿಯಾ ನಿನ್ನನ್ನು ಬೀಡುವುದಿಲ್ಲಾ ಎಂದು ಅದನ್ನೆ ಮನಸ್ಸಿನಲ್ಲಿ ಇಟ್ಟುಕೊಂಡ ತಮ್ಮಂದಿರಾದ ಅಶೋಕ್ ರಾಮಾ ನಾಯ್ಕ ಹಾಗೂ ರಾಜೇಶ ರಾಮಾ ನಾಯ್ಕ ಇಬ್ಬರು ತಮ್ಮ ಅಣ್ಣ ಈಶ್ವರನು ತೋಟಕ್ಕೆ ಬರುವುದನ್ನು ಕಾದು ಕುಳಿತು ನೋಡಿ ಈಶ್ವರ ನಾಯ್ಕ ತೋಟಕ್ಕೆ ಬಂದು ಕೆಲಸ ಮಾಡುತ್ತಿರುವಾಗ ಏಕಾಏಕಿ ಪಿರ್ಯಾದಿಗೆ ಕಂದಲಿಯ ಹಿಂಬಾಗದಿಂದ ಹೋಡೆದು ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿದ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.
ದೂರುದಾರನಿಗೆ ಹಲ್ಲೆಯಿಂದ ಕೈ ಕಾಲು ಕುತ್ತಿಗೆ ಹಾಗೂ ಬೆನ್ನಿಗೆ ಗಾಯವಾಗಿದೆ.