ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆಯಿಂದ ಬಿಜೆಪಿಯ 18 ಶಾಸಕರನ್ನು 6 ತಿಂಗಳುಗಳ ಕಾಲ ಸ್ಪೀಕರ್ ಅಮಾನತುಗೊಳಿಸಿದ್ದು, ಇದರ ಬೆನ್ನಲ್ಲೇ ಸದನದ ಭಾವಿಗೆ ಇಳಿದು ಬಿಜೆಪಿ-ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದರು. ಈ ಹಿನ್ನಲೆಯಲ್ಲಿ ವಿಧಾನಸಭೆಯ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಿ ಸ್ಪೀಕರ್ ಆದೇಶಿಸಿದರು.
ಬಿಜೆಪಿಯ ಸದಸ್ಯರ ತೀವ್ರ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಮಧ್ಯಾಹ್ನದ ಕಲಾಪದ ನಂತರ ಕೆಲ ವಿಧೇಯಕಗಳನ್ನು ಮಂಡಿಸೋದಕ್ಕೆ ಮುಂದಾಗಲಾಗಿತ್ತು. ಆದರೇ ಸಚಿವರಿಗೆ ಹನಿಟ್ರ್ಯಾಪ್ ವಿಚಾರ ಪ್ರತಿಧ್ವನಿಸಿತು. ಬಿಜೆಪಿ, ಜೆಡಿಎಸ್ ಸದಸ್ಯರು ತನಿಖೆಗೆ ಆಗ್ರಹಿಸಿ ಪ್ರತಿಭಟನೆಯನ್ನು ತೀವ್ರಗೊಳಿಸಿದರು.
ಸ್ಪೀಕರ್ ಪೀಠಕ್ಕೆ ಅಗೌರವ ತೋರಿದಂತ 18 ಬಿಜೆಪಿ ಶಾಸಕರನ್ನು ಸ್ಪೀಕರ್ ಯು.ಟಿ ಖಾದರ್ ಅಮಾನತುಗೊಳಿಸಿ ಆದೇಶಿಸಿದರು.
ಈ ಬೆನ್ನಲ್ಲೇ ಸಚಿವ ಹೆಚ್.ಕೆ ಪಾಟೀಲ್ ಅವರು ಅರಮನೆ ಭೂ ಬಳಕೆ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. ಸ್ಪೀಕರ್ ಈ ವಿಧೇಯಕವನ್ನು ಸದನದ ಮತಕ್ಕೆ ಹಾಕಿದರು. ಆದರೇ ಬಿಜೆಪಿ ತೀವ್ರ ವಿರೋಧ, ಗದ್ದಲವನ್ನು ಏಳಿಸಲಾಯಿತು. ಈ ವಿರೋಧ, ಗದ್ದಲದ ನಡುವೆ ಅಂಗೀಕಾರ ನೀಡಲಾಯಿತು.
ಸದನದ ಬಾವಿಗೆ ಇಳಿದು ಬಿಜೆಪಿ-ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದ ಕಾರಣ, ವಿಧಾನಸಭೆಯ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಿ ಸ್ಪೀಕರ್ ಯು.ಟಿ ಖಾದರ್ ಆದೇಶಿಸಿದರು.