ಬಟ್ಟೆ ಕೊಳ್ಳುವ ವಿಚಾರಕ್ಕೆ ಗಲಾಟೆ: ಪತ್ನಿಯನ್ನು ಪೆಟ್ರೋಲ್ ಸುರಿದು ಸುಟ್ಟ ಪತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಟ್ಟೆ ಕೊಳ್ಳುವ ವಿಚಾರಕ್ಕೆ ಪತಿ ಮತ್ತು ಪತ್ನಿ ಮಧ್ಯೆ ಗಲಾಟೆ ಶುರುವಾಗಿ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಪತ್ನಿಯನ್ನೇ ಪತಿ ಹತ್ಯೆಗೈದಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದಾಬಸ್​​​ಪೇಟೆಯಲ್ಲಿ ನಡೆದಿದೆ.

ಪತಿ ಶಿವಾನಂದ ಪತ್ನಿ ಕಾವ್ಯಾ(27) ರನ್ನು ಹತ್ಯೆಗೈದು ಪರಾರಿಯಾಗಿದ್ದರು. ಕಾವ್ಯಾ ಪೋಷಕರ ದೂರಿನನ್ವಯ ಶಿವಾನಂದ ಬಂಧಿಸಲಾಗಿದೆ.

ಕಾವ್ಯಾ ಮತ್ತು ಶಿವಾನಂದ 6 ವರ್ಷಗಳ ಹಿಂದೆ ಮದುವೆಯಾಗಿದ್ದು, ಎರಡು ಮಕ್ಕಳಿದ್ದಾರೆ. ಶಿವಾನಂದ ದಾಬಸ್ ಪೇಟೆ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ 6 ತಿಂಗಳ ಹಿಂದೆಯಷ್ಟೇ ಆರೋಗ್ಯ ಸಮಸ್ಯೆಯಿಂದ ಕೆಲಸ ಬಿಟ್ಟಿದ್ದಾರೆ.

ತಿಂಗಳ ಹಿಂದೆ ಗಲಾಟೆ ಮಾಡಿ ಕಾವ್ಯಾ ತವರು ಸೇರಿದ್ದರು. ವಾರದ ಹಿಂದೆಯಷ್ಟೇ ಪತ್ನಿಯನ್ನ ಪತಿ ಮನೆಗೆ ಕರೆತಂದಿದ್ದರು. ವರಮಹಾಲಕ್ಷ್ಮಿ ಹಬ್ಬಕ್ಕೆ ಬಟ್ಟೆ ಕೊಡಿಸುತ್ತೆನೆಂದು ಕೊಡಿಸಿಲ್ಲ. ಹೀಗೆ ಆದರೆ ತವರು ಮನೆಗೆ ತೆರಳುವುದಾಗಿ ಕ್ಷುಲ್ಲಕ ಕಾರಣಗಳಿಗಾಗಿ ಗಲಾಟೆ ಉಂಟಾಗಿ ಬಳಿಕ ಕೊಲೆ ಮಾಡಲಾಗಿದೆ. ನಂತರ ಮೃತದೇಹವನ್ನು ಪೆಟ್ರೋಲ್​ ಸುರಿದು ಸುಟ್ಟು ಹಾಕಿದ್ದಾರೆ.

ಇತ್ತ ತಂಗಿ ರಮ್ಯಾರ ಫೋನ್​ ತೆಗೆಯದ ಮೃತ ಕಾವ್ಯ, ಅನುಮಾನಗೊಂಡು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಪೊಲೀಸರ ಜೊತೆ ಸೀನ್ ಆಫ್ ಕ್ರೈಂ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ನೆಲಮಂಗಲ ಡಿವೈಎಸ್​ಪಿ ಜಗದೀಶ್ ನೇತೃತ್ವದಲ್ಲಿ ತನಿಖೆ ಮಾಡಿದ್ದು, ಕಾವ್ಯ ಪೋಷಕರ ಕರೆ ಸ್ವೀಕರಿಸಿದೆ ಎಸ್ಕೇಪ್ ಆಗಿದ್ದ ಪತಿ ಶಿವಾನಂದನನ್ನ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ಸದ್ಯಕ್ಕೆ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!