Thursday, September 18, 2025

ಮದುವೆ ವಿಚಾರದಲ್ಲಿ ಗಲಾಟೆ: ಕೆರೆಗೆ ಹಾರಿ ಯುವತಿ ಆತ್ಮಹತ್ಯೆ, ರಕ್ಷಣೆಗೆ ಹೋದ ತಾಯಿಯೂ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಲಬುರಗಿಯ ಆಳಂದ ತಾಲೂಕಿನ ತಡಕಲ್ ಗ್ರಾಮದಲ್ಲಿ ಮದುವೆ ವಿಚಾರಕ್ಕೆ ಮನನೊಂದು ಕೆರೆಗೆ ಹಾರಿದ ಮಗಳನ್ನು ರಕ್ಷಣೆ ಮಾಡಲು ಹೋದ ತಾಯಿ ಸಹ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಧುಮತಿ ಹಂಗರಗಿ (22), ತಾಯಿ ಜಗದೇವಿ ಹಂಗರಗಿ (45) ಮೃತ ದುರ್ದೈವಿಗಳು. ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವತಿಯ ಮದುವೆ ವಿಚಾರವನ್ನು ಮನೆಮಂದಿ ಪ್ರಸ್ತಾಪಿಸಿದ್ದರು.

ಸೆಪ್ಟೆಂಬರ್ 14ರ ರಾತ್ರಿ ಮದುವೆ ವಿಷಯದಲ್ಲಿ ಗಲಾಟೆ ನಡೆದಿತ್ತು. ಇದರಿಂದ ಮನನೊಂದ ಯುವತಿ ರಾತ್ರಿ 9ರ ಸುಮಾರಿಗೆ ಮನೆಯಿಂದ ಹೊರ ಹೋಗಿದ್ದಳು. ಆಕೆಯನ್ನು ಹುಡುಕಿಕೊಂಡು ತಾಯಿ ಕೂಡ ಹೋಗಿದ್ದರು. ತಡರಾತ್ರಿಯಾದರೂ ತಾಯಿ, ಮಗಳು ಇಬ್ಬರೂ ಮನೆಗೆ ಮರಳದೆ ಇದ್ದುದ್ದರಿಂದ ಕುಟುಂಬಸ್ಥರು ಆತಂಕಗೊಂಡು ಎಲ್ಲೆಡೆ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಬುಧವಾರ ಬೆಳಗ್ಗೆ ದೂರದ ಜಮೀನಿನ ಕೆರೆಯಲ್ಲಿ ಇಬ್ಬರ ಶವಗಳು ಪತ್ತೆಯಾಗಿದೆ.

ಮಗಳ ಕೆರೆಗೆ ಹಾರಿರುವುದನ್ನು ಕಂಡ ತಾಯಿ, ಆಕೆಯ ರಕ್ಷಣೆಗೆ ಹೋಗಿ ತಾಯಿಯೂ ಮೃತಪಟ್ಟಿರಬೇಕು ಎಂದು ಶಂಕೆ ವ್ಯಕ್ತವಾಗಿದೆ.

ಶರಣಬಸಪ್ಪಾ ಹಂಗರಗಿ ನೀಡಿದ ದೂರು ಆಧಾರದಲ್ಲಿ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ