ಕಾಂಗ್ರೆಸ್‌ ನಗರ ನಕ್ಸಲರಿಂದ ಆಡಳಿತ ನಡೆಸುತ್ತಿದೆ: ಪ್ರಧಾನಿ ಮೋದಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್‌ ನಗರ ನಕ್ಸಲೀಯರಿಂದ ಆಡಳಿತ ನಡೆಸುತ್ತಿದೆ. ಘೋಷಣೆಗಳಿಂದ ಹಿಡಿದು ನೀತಿ ರೂಪಿಸುವವರೆಗೆ ಕಾಂಗ್ರೆಸ್ ಈಗ ಎಲ್ಲವನ್ನೂ ನಗರ ನಕ್ಸಲರಿಗೆ ಹೊರಗುತ್ತಿಗೆ ನೀಡುತ್ತಿದೆ ಎಂದು ಕಾಂಗ್ರೆಸ್‌ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ವಿಧಾನಸಭಾ ಚುನಾವಣೆ ಎದುರಿಸಲಿರುವ ಮಧ್ಯಪ್ರದೇಶದ ಭೋಪಾಲ್‌ನ ಜಾಂಬೋರಿ ಮೈದಾನದಲ್ಲಿ ಬಿಜೆಪಿಯ ‘ಕಾರ್ಯಕರ್ತ ಮಹಾಕುಂಬ್’ ಬೃಹತ್ ಸಭೆಯನ್ನುದ್ದೇಶಿಸಿ ಇಂದು ಮೋದಿ ಮಾತನಾಡಿದರು. ಕಾಂಗ್ರೆಸ್‌ ಪಕ್ಷ ನಿಷ್ಪ್ರಯೋಜಕ ತುಕ್ಕುಹಿಡಿದ ಕಬ್ಬಿಣವಾಗಿದೆ. ಘೋಷಣೆಗಳಿಂದ ಹಿಡಿದು ನೀತಿ ರೂಪಿಸುವವರೆಗೆ ಎಲ್ಲವನ್ನೂ ಹೊರಗುತ್ತಿಗೆ ನೀಡುತ್ತಿದೆ. ಹೀಗಾಗಿ ನಗರ ನಕ್ಸಲರಿಂದ ಪಕ್ಷ ನಡೆಸಲಾಗುತ್ತಿದೆ ಎಂದು ದೂರಿದರು.

ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಬೆಳ್ಳಿ ಚಮಚದೊಂದಿಗೆ ಹುಟ್ಟಿದ ನಾಯಕರಿಗೆ ಬಡವರ ಸಮಸ್ಯೆಗಳು ವಿಡಿಯೋ ಚಿತ್ರೀಕರಣಕ್ಕಾಗಿ ಸೀಮಿತವಾಗಿದೆ. ಆದರೆ ಬಿಜೆಪಿ ದೇಶದ ಜನರ ಅಭಿವೃದ್ಧಿಗೆ ಶ್ರಮಿಸಿದೆ. ದೇಶದ ಜನರು ಯಾವುದರಿಂದಲೂ ವಂಚಿತರಾಗಲು ಬಿಡುವುದಿಲ್ಲ. ಮಧ್ಯಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು 100 ಪ್ರತಿಶತದಷ್ಟು ಬೆಂಬಲ ನೀಡಬೇಕೆಂದು ಪಕ್ಷದ ಕಾರ್ಯಕರ್ತರಲ್ಲಿ ಪ್ರಧಾನಿ ಒತ್ತಾಯಿಸಿದರು.

ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಮಹಿಳಾ ಮೀಸಲಾತಿ ಮಸೂದೆಯನ್ನು ಬಲವಂತದಿಂದ ಬೆಂಬಲಿಸಿವೆ. ಪ್ರತಿಪಕ್ಷಗಳ ಉದ್ದೇಶದಲ್ಲಿ ಲೋಪವಿದೆ. ದುರಹಂಕಾರಿ ಮೈತ್ರಿಕೂಟ ಬಲವಂತದಿಂದ ಬೆಂಬಲ ನೀಡಿದ್ದು, ಇದೀಗ ದುರಹಂಕಾರಿ ಮೈತ್ರಿಕೂಟ ಹೊಸ ಆಟವಾಡಲಿದೆ. ಮಹಿಳಾ ಶಕ್ತಿಯನ್ನು ಹತ್ತಿಕ್ಕುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!