ಅರ್ಜೆಂಟ್ ಆಗಿತ್ತು ತಡೆಯೋದಕ್ಕೆ ಆಗದೆ ಬಸ್ ಸ್ಟ್ರಾಂಡ್‌ನಲ್ಲೋ ಅಥವಾ ರೈಲ್ವೆ ಸ್ಟೇಷನ್ಸ್‌ನಲ್ಲಿ ಇಲ್ಲವೇ ಸಾರ್ವಜನಿಕ ಶೌಚಾಲಯಗಳನ್ನು ಬಳಸಿರುತ್ತೀರಿ. ಇಲ್ಲಿಂದ ನೀವು ಬ್ಯಾಕ್ಟೀರಿಯಾಗಳನ್ನು ತೆಗೆದುಕೊಂಡು ಹೋಗಿರುತ್ತೀರಿ ಎನ್ನೋದನ್ನು ಮರೆಯಬೇಡಿ. ಕೆಲವೊಮ್ಮೆ ಮನೆಯಲ್ಲಿಯೇ ಇನ್ಫೆಕ್ಷನ್ ಆಗುವ ಸಾಧ್ಯತೆಯೂ ಇದೆ.
ಯೂರಿನರಿ ಟ್ರ್ಯಾಕ್‌ನಲ್ಲಿ ಬ್ಯಾಕ್ಟೀರಿಯಾ ಇನ್ಫೆಕ್ಷನ್ ಆಗುತ್ತದೆ. ಈ ಸೋಂಕು ಬ್ಲಾಡರ್, ಕಿಡ್ನಿ, ಯುರೇತ್ರಾ ಹಾಗೂ ಯುರೇಟಸ್‌ಗೂ ಹರಡಬಹುದು.
ಸಮಸ್ಯೆ ಇದೆ ಎಂದು ಗೊತ್ತಾಗೋದು ಹೇಗೆ?
ಮೂತ್ರ ವಿಸರ್ಜನೆ ವೇಳೆ ನೋವು, ಉರಿ
ಮೂತ್ರದಿಂದ ಕೆಟ್ಟ ವಾಸನೆ ಬರುವುದು
ಕೆಲವರಿಗೆ ಮೂತ್ರದಲ್ಲಿ ರಕ್ತ ಕಾಣಿಸಬಹುದು
ಆಗಾಗ ಮೂತ್ರ ವಿಸರ್ಜನೆಗೆ ಅರ್ಜೆಂಟ್ ಆಗುವುದು
ಹೊಟ್ಟೆ ಹಾಗೂ ಬ್ಯಾಕ್ ನೋವು
ಜ್ವರ, ಚಳಿ ಹಾಗೂ ಸುಸ್ತು
ಏನು ಮಾಡಬಹುದು?
ಚೆನ್ನಾಗಿ ನೀರು ಕುಡಿಯಿರಿ, ಬ್ಯಾಕ್ಟೀರಿಯಾ ನಿಮ್ಮ ದೇಹದಿಂದ ಹೊರಹೋಗುವಷ್ಟು ಹೆಚ್ಚು ನೀರು ಕುಡಿಯಿರಿ.
ನಿಮ್ಮ ಬ್ಲಾಡರ್‌ಗೆ ಕಿರಿಕಿರಿ ಮಾಡುವಂಥ ಡ್ರಿಂಕ್ಸ್ ಕುಡಿಯಬೇಡಿ. ಉದಾಹರಣೆಗೆ ಮದ್ಯಪಾನ, ಸಿಟ್ರಸ್ ಹಣ್ಣುಗಳ ಜ್ಯೂಸ್, ಕಾಫಿ, ಸೋಡಾ ಕುಡಿಯಬೇಡಿ