ಪರಮಾಣು ತಾಣಗಳ ಮೇಲೆ ಅಮೆರಿಕದ ವೈಮಾನಿಕ ದಾಳಿ: ಸತ್ಯ ಒಪ್ಪಿಗೊಂಡ ಇರಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ವೈಮಾನಿಕ ದಾಳಿಯ ನಂತರ ಮೊದಲ ಬಾರಿಗೆ ಇರಾನ್ ತನ್ನ ಪರಮಾಣು ಸೌಲಭ್ಯಗಳಿಗೆ ಆದ ಭಾರೀ ಹಾನಿಯನ್ನು ಅಧಿಕೃತವಾಗಿ ಒಪ್ಪಿಕೊಂಡಿದೆ.

ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ಹೇಳಿಕೊಂಡಿದ್ದಾರೆ.

ಬಂಕರ್-ಬಸ್ಟರ್ ಬಾಂಬ್‌ಗಳನ್ನು ಬಳಸಿಕೊಂಡು ಇರಾನಿನ 3 ಪ್ರಮುಖ ಪರಮಾಣು ತಾಣಗಳನ್ನು ಗುರಿಯಾಗಿಸಿಕೊಂಡ ಯುಎಸ್ ಬಿ -2 ಬಾಂಬರ್ ದಾಳಿಗಳ ಪರಿಣಾಮದ ಬಗ್ಗೆ ಇರಾನ್‌ನ ಮೊದಲ ಬಾರಿ ದೃಢೀಕರಣವನ್ನು ನೀಡಿದೆ.

ಈ ಬಗ್ಗೆ ಅಲ್ ಜಜೀರಾ ಜೊತೆ ಮಾತನಾಡಿದ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘಾಯ್, “ನಮ್ಮ ಪರಮಾಣು ಸ್ಥಾಪನೆಗಳು ತೀವ್ರವಾಗಿ ಹಾನಿಗೊಳಗಾಗಿವೆ, ಅದು ಸತ್ಯ. ಆದರೆ, ಹೆಚ್ಚಿನ ವಿವರಗಳನ್ನು ಸದ್ಯಕ್ಕೆ ನೀಡಲು ಸಾಧ್ಯವಿಲ್ಲ” ಎಂದಿದ್ದಾರೆ.

ಇರಾನ್ ಮಾತುಕತೆಗಳನ್ನು ಕೈಬಿಟ್ಟಿಲ್ಲ ಎಂದು ಹೇಳಿರುವ ಎಸ್ಮಾಯಿಲ್ ಬಘಾಯ್, ಯುಎಸ್ ವೈಮಾನಿಕ ದಾಳಿಗಳನ್ನು ಅಂತಾರಾಷ್ಟ್ರೀಯ ಕಾನೂನು, ನೀತಿಶಾಸ್ತ್ರ ಮತ್ತು ರಾಜತಾಂತ್ರಿಕತೆಗೆ ಆದ ಹಾನಿಕರ ಹೊಡೆತ ಎಂದು ಖಂಡಿಸಿದರು. ಅಮೆರಿಕದ ಅಧ್ಯಕ್ಷರು ಸಂವಾದ ಮತ್ತು ರಾಜತಾಂತ್ರಿಕತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅದರ ಜೊತೆಗೆ ಅವರು ಆಕ್ರಮಣಕಾರಿ ಕೃತ್ಯಗಳನ್ನು ಮಾಡುತ್ತಿದ್ದಾರೆ. ಈ ವಿರೋಧಾಭಾಸಗಳು ಹೆಚ್ಚು ಹೆಚ್ಚು ಸಮಸ್ಯೆಗಳನ್ನು ಸೃಷ್ಟಿಸಿವೆ ಎಂದು ಅವರು ಟೀಕಿಸಿದ್ದಾರೆ.

ಇರಾನ್‌ನ ಪರಮಾಣು ಮೂಲಸೌಕರ್ಯದ ಮೇಲಿನ ಅಮೆರಿಕ ವೈಮಾನಿಕ ದಾಳಿಯಲ್ಲಿ 125 ಮಿಲಿಟರಿ ವಿಮಾನಗಳು ಸೇರಿದ್ದವು. ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಎಂಬ ಮೂರು ಪ್ರಮುಖ ಸೌಲಭ್ಯಗಳನ್ನು ಹೊಡೆದುರುಳಿಸಲಾಗಿತ್ತು. ನಂತರ ಉಪಗ್ರಹ ಚಿತ್ರಣವು ಫೋರ್ಡೋದಲ್ಲಿನ ಎರಡು ಪ್ರವೇಶ ಬಿಂದುಗಳ ಸುತ್ತಲೂ 6 ಹೊಸ ಕುಳಿಗಳನ್ನು ಬಹಿರಂಗಪಡಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!