ವಿಶ್ವದ ಪವರ್‌ಫುಲ್‌ ವೆಪೆನ್‌ ಬಳಸಿ ಇರಾನ್‌ ಪರಮಾಣು ಕೇಂದ್ರದ ಮೇಲೆ ಅಮೆರಿಕ ದಾಳಿ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್‌-ಇಸ್ರೇಲ್‌ ಸಂಘರ್ಷಕ್ಕೆ ಅಮೆರಿಕ ಅಧಿಕೃತವಾಗಿ ಎಂಟ್ರಿಯಾಗಿದೆ. ಇರಾನ್‌ನ ಫೋರ್ಡೊ, ನಟಾಂಜ್ ಮತ್ತು ಎಸ್ಪಹಾನ್‌ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಬಾಂಬ್‌ ದಾಳಿ ನಡೆಸಿದೆ.

ಅಷ್ಟೇ ಅಲ್ಲ.. 14,000 ಕೆಜಿ ತೂಕ ಹೊಂದಿರುವ ಹಾಗೂ ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ವೆಪನ್ ಬಿ-12 ಬಾಂಬರ್‌ ಬಳಸಿ ಅಮೆರಿಕ ದಾಳಿ ನಡೆಸಿದೆ. ವರದಿಗಳ ಪ್ರಕಾರ, ಅಮೆರಿಕವು 6 ಶಕ್ತಿಶಾಲಿ Northrop B-2 Spirit ಯುದ್ಧವಿಮಾನ ಬಳಸಿಕೊಂಡು ಡಜನ್‌ಗಟ್ಟಲೇ ಜಿಬಿಯು -57 ಎ/ಬಿ ಬೃಹತ್ ಆರ್ಡ್‌ನೆನ್ಸ್ ಪೆನೆಟ್ರೇಟರ್ ಬಾಂಬ್‌ಗಳನ್ನ ಬಳಸಿ ದಾಳಿ ನಡೆಸಿದೆ.

ʻಬಂಕರ್‌ ಬಸ್ಟರ್‌ʼ ಇರಾನ್‌ ರಾಜಧಾನಿ ಟೆಹ್ರಾನ್‌ನಿಂದ 100 ಕಿಮೀ ದೂರದಲ್ಲಿರುವ ಫೋರ್ಡೋ ಘಟಕದ ಮೇಲೆ ದಾಳಿ ಮಾಡಿದ್ರೆ, ಜಲಾಂತರ್ಗಾಮಿ ನೌಕೆಗಳಿಂದ ಹಾರಿಸಲಾದ 30 ಟೊಮಾಹಾಕ್ ಕ್ಷಿಪಣಿಗಳು ಉಳಿದ 2 ಅಣು ಕೇಂದ್ರಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿವೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!