ಅಮೆರಿಕಾ-ಚೀನಾ ಸುಂಕ ಸಮರ: ಡ್ರ್ಯಾಗನ್ ರಾಷ್ಟ್ರಕ್ಕೆ ಮತ್ತೆ 245% ಸುಂಕ ವಿಧಿಸಿದ ಟ್ರಂಪ್‌ ಸರಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕಾ, ಚೀನಾ ಸುಂಕ ಸಮರಕ್ಕೆ ಇವತ್ತು ಮತ್ತೊಂದು ತಿರುವು ಸಿಕ್ಕಿದೆ ಟ್ರಂಪ್‌ ಆಡಳಿತವು ಚೀನಾದ ಆಮದು ಸರಕುಗಳ ಮೇಲೆ ಶೇ.245 ರಷ್ಟು ಸುಂಕ (Tariffs) ವಿಧಿಸಿದೆ ಎಂದು ವೈಟ್ ಹೌಸ್ ಮಾಹಿತಿ ನೀಡಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರು ಏಪ್ರಿಲ್ 2ರಿಂದ ವಿಶ್ವದ ಎಲ್ಲಾ ರಾಷ್ಟ್ರಗಳ ಮೇಲೆ ತೆರಿಗೆ ಯುದ್ಧ ಆರಂಭಿಸಿದ್ದಾರೆ. ಮಂಗಳವಾರ ಶ್ವೇತಭವನ ಬಿಡುಗಡೆ ಮಾಡಿದ ಫ್ಯಾಕ್ಟ್‌ ಶೀಟ್‌ ಪ್ರಕಾರ 245% ಸುಂಕ ನಿಗಧಿಪಡಿಸಿರುವುದು ಖಚಿತವಾಗಿದೆ. ಈ ಮೂಲಕ ಚೀನಾ (China) ಪ್ರತಿರೋಧಕ್ಕೆ ಅಮೆರಿಕ ದೊಡ್ಡ ಹೊಡೆತ ಕೊಟ್ಟಿದೆ.

ಇತ್ತೀಚೆಗಷ್ಟೇ ಅಮೆರಿಕದ 145% ಪ್ರತಿಸುಂಕ ನೀತಿಗೆ ವಿರುದ್ಧವಾಗಿ ಚೀನಾ ಅಮೆರಿಕದ ವಸ್ತುಗಳಿಗೆ 125% ಸುಂಕ ವಿಧಿಸಿತ್ತು. ಅಲ್ಲದೇ ಒಂದು ದಿನದ ಹಿಂದೆಯಷ್ಟೇ ಸೆಮಿಕಂಡಕ್ಟರ್‌, ಐಟಿ ಉತ್ಪನ್ನಗಳಲ್ಲಿ ಬಳಕೆಯಾಗುವ ಅಪರೂಪದ ಲೋಹ ರಫ್ತಿಗೆ ನಿರ್ಬಂಧ ಹೇರಿತ್ತು. ಜೊತೆಗೆ ಅಮೆರಿಕದ ಬೋಯಿಂಗ್‌ ಕಂಪನಿಯ ವಿಮಾನ ಖರೀದಿ ನಿಲ್ಲಿಸುವಂತೆ ತನ್ನ ದೇಶದ ವಿಮಾನಯಾನ ಸಂಸ್ಥೆಗಳಿಗೆ ಆದೇಶ ನೀಡಿತ್ತು. ಇದಕ್ಕೆ ಪ್ರತೀಕಾರವಾಗಿ ಅಮೆರಿಕ ಚೀನಾದ ಆಮದು ವಸ್ತುಗಳ ಮೇಲಿನ ಸುಂಕವನ್ನು ಬರೋಬ್ಬರಿ 245%ಗೆ ಏರಿಕೆ ಮಾಡಿದೆ.

ಅಮೆರಿಕದ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್, ಸುಂಕದ ವಿಷಯದಲ್ಲಿ ಚೀನಾ ತನ್ನ ಗಂಭೀರ ನಿಲುವನ್ನು ಪದೇ ಪದೇ ಹೇಳುತ್ತಲೇ ಇದೆ. ಸುಂಕದ ಸಮರವನ್ನು ಮೊದಲು ಪ್ರಾರಂಭಿಸಿದ್ದು ಅಮೆರಿಕ. ಚೀನಾ ತನ್ನ ಕಾನೂನುಬದ್ಧ ಹಕ್ಕುಗಳು, ಹಿತಾಸಕ್ತಿ ಕಾಪಾಡಲು ಅಗತ್ಯ ಪ್ರತಿಕ್ರಮಗಳನ್ನು ತೆಗೆದುಕೊಂಡಿದೆ ಅಷ್ಟೇ ಅಂತ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!