ಭಾರತದ ವಿರುದ್ಧ ನಿರ್ಣಯ ಮಂಡಿಸಿದ ಯುಎಸ್ ಕಾಂಗ್ರೆಸ್ ಸದಸ್ಯೆ, ಶ್ವೇತಭವನ ತೀರ್ಮಾನವೇನು..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೆರಿಕದ ಡೆಮಾಕ್ರಟಿಕ್ ಪಕ್ಷದ ನಾಯಕಿ ಇಲ್ಹಾನ್ ಒಮರ್ ಮತ್ತೊಮ್ಮೆ ಭಾರತದ ಮೇಲಿರುವ ತನ್ನ ವಿರೋಧವನ್ನು ಪ್ರದರ್ಶಿಸಿದ್ದಾರೆ. ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ ಎಂದು ಆಕೆ ಪದೇ ಪದೇ ವ್ಯಾಖ್ಯಾನಿಸಿದ್ದಾರೆ. ಅಲ್ಲದೆ ಎರಡು ತಿಂಗಳ ಹಿಂದೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿ ವಾಪಸಾಗಿದ್ದು, ಇದೀಗ ಅಮೆರಿಕ ಕಾಂಗ್ರೆಸ್ ಭಾರತದ ವಿರುದ್ಧ ಕೆಳಮನೆಯಲ್ಲಿ ನಿರ್ಣಯ ಮಂಡಿಸಿರುವುದು ಗಮನಾರ್ಹ.

ಈ ನಿರ್ಣಯವನ್ನು ಕಾಂಗ್ರೆಸ್‌ನ ಜುವಾನ್ ವರ್ಗಾಸ್ ಜೊತೆ ಸೇರಿ ಭಾರತದಲ್ಲಿ ನಾಗರಿಕ ಸ್ವಾತಂತ್ರ್ಯಗಳ ಉಲ್ಲಂಘನೆಯನ್ನು ಗುರುತಿಸಲು ಅಮೆರಿಕಾ ವಿದೇಶಾಂಗ ಇಲಾಖೆಗೆ ಕರೆ ನೀಡಿದರು. ಮೂರು ವರ್ಷಗಳಿಂದ ಮಾನವ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತಿರುವ ಭಾರತವನ್ನು ಪ್ರಕ್ಷುಬ್ಧ ರಾಷ್ಟ್ರವೆಂದು ಗುರುತಿಸಲು ಅಧ್ಯಕ್ಷ ಬಿಡೆನ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ನಿರ್ಣಯವನ್ನು ವಿದೇಶಾಂಗ ವ್ಯವಹಾರಗಳ ಸಮಿತಿಯ ಕಚೇರಿಗೂ ಕಳುಹಿಸಲಾಗಿದೆ. ಆದರೆ, ಬಹಿರಂಗವಾಗಿ ಪಾಕಿಸ್ತಾನ ಅಧಿಕಾರಿಗಳ ಪರವಾಗಿ ನಿಲ್ಲುವ ಇಲ್ಹಾನ್ ಒಮರ್ ನಿರ್ಣಯವನ್ನು ಅನುಮೋದಿಸುವ ಸಾಧ್ಯತೆ ತೀರಾ ಕಡಿಮೆ ಎಂದು ಶ್ವೇತಭವನ ಮೂಲಗಳು ತಿಳಿಸಿವೆ. ಎರಡು ತಿಂಗಳ ಹಿಂದೆ ಪಿಒಕೆಗೆ ಭೇಟಿ ನೀಡಿದ್ದನ್ನು ಭಾರತ ನಿರಾಕರಿಸಿದೆ. ಆಕೆಯ ಭೇಟಿಗೂ ಅಮೇರಿಕಾಗೂ ಯಾವುದೇ ಸಂಬಂಧವಿಲ್ಲ ಎಂದು ಸರ್ಕಾರ ತಕ್ಷಣವೇ ಘೋಷಿಸಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!