ದಾಖಲೆ ಬರೆದ ಅಮೆರಿಕ: 1,40,000 ವಿದ್ಯಾರ್ಥಿ ವೀಸಾ ವಿತರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತೀಯ ವಿದ್ಯಾರ್ಥಿಗಳಿಗೆ ತಮ್ಮ ದೇಶದಲ್ಲಿ ಅಧ್ಯಯನ ಮಾಡಲು 1,40,000 ವೀಸಾಗಳನ್ನು ವಿತರಿಸಿ, ಅಮೆರಿಕ ದಾಖಲೆ ಬರೆದಿದೆ. ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮತ್ತು ಅದರ ದೂತಾವಾಸಗಳು ಅಕ್ಟೋಬರ್ 2022 ಮತ್ತು ಸೆಪ್ಟೆಂಬರ್ 2023ರ ನಡುವೆ 1,40,000 ವಿದ್ಯಾರ್ಥಿ ವೀಸಾ ವಿತರಿಸಿ ಸಾರ್ವಕಾಲಿಕ ದಾಖಲೆ ಬರೆದಿದೆ ಎಂದು ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್ ತಿಳಿಸಿದೆ.

ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕಾಗಿ ಇದವರೆಗೂ 8 ದಶಲಕ್ಷಕ್ಕೂ ಹೆಚ್ಚು ಸಂದರ್ಶಕ ವೀಸಾಗಳನ್ನು ನೀಡಿವೆ. ರಾಯಭಾರ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲದೇ, ಪ್ರಯಾಣಿಕರು ತಮ್ಮ ವೀಸಾಗಳನ್ನು ನವೀಕರಿಸಲು ಅನುವು ಮಾಡಿಕೊಡುವ ವೀಸಾ ಸಂದರ್ಶನ ಮನ್ನಾ ಅಧಿಕಾರವನ್ನು ವಿಸ್ತರಿಸುವಂತಹ ಹೊಸ ಕ್ರಮಗಳಿಂದ ಇದು ಸಾಧ್ಯವಾಯಿತು ಎಂದು ಅಮೆರಿಕ ಹೇಳಿದೆ.

ಕಳೆದ ವರ್ಷ 1.2 ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯರು ಯುಎಸ್‌ಗೆ ಭೇಟಿ ನೀಡಿದ್ದು, ಇದು ವಿಶ್ವದ ಪ್ರಬಲ ಪ್ರಯಾಣಗಳಲ್ಲಿ ಒಂದು ಎಂದು ಅಮೆರಿಕ ಬಣ್ಣಿಸಿದೆ. ಇದರ ನಡುವೆ ಭಾರತದ ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ, ರಾಷ್ಟ್ರ ರಾಜಧಾನಿಯಲ್ಲಿನ ಯುಎಸ್ ಮಿಷನ್‌ಗೆ ಭೇಟಿ ನೀಡಿ ಯುಎಸ್ ಸಂದರ್ಶಕ ವೀಸಾಗಳಿಗೆ ಭಾರತೀಯರು ಸಲ್ಲಿಸಿರುವ ಅರ್ಜಿಯನ್ನು ಮೇಲ್ವಿಚಾರಣೆ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!