ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ಪರೀಕ್ಷೆಯಲ್ಲಿ ಪಾಸಾದರೆ ಸಾಕು..ಅವರ ಸಂಭ್ರಮಕ್ಕೆ ಪಾರವೇ ಇಲ್ಲ. ಇನ್ನು ಪಾಸಾದ ಪ್ರಮಾಣ ಪತ್ರವನ್ನು ಎಲ್ಲರೆದುರು ಪಡೆಯುವುದು ಅಂದರೆ, ಅದಕ್ಕಿಂತ ಹೆಮ್ಮ ವಿಷಯವೂ ಮತ್ತೊಂದಿರುವುದಿಲ್ಲ. ಕೆಲವರು ಹಾಡುವುದರ ಮೂಲಕ, ಇನ್ನು ಕೆಲವರು ನೃತ್ಯದ ಮೂಲಕ ಆ ಸಂತಸವನ್ನು ವ್ಯಕ್ತಪಡಿಸುತ್ತಾರೆ. ಇಲ್ಲಿಯೂ ಹಾಗೆ ಪದವಿ ಮುಗಿಸಿದ ಹುಡುಗಿಯೊಬ್ಬಳು ಡಿಗ್ರಿ ತೆಗೆದುಕೊಳ್ಳುವಾಗ ವೇದಿಕೆಯ ಮೇಲೆ ಪುಟ್ಟ ಡ್ಯಾನ್ಸ್ ಮಾಡಿದ್ದಾಳೆ. ಅದೇ ಅವಳ ಖುಷಿಗೆ ಬ್ರೇಕ್ ಹಾಕಿದೆ.
ಅಮೆರಿಕದ ದಿ ಫಿಲಡೆಲ್ಫಿಯಾ ಹೈಸ್ಕೂಲ್ ಫಾರ್ ಗರ್ಲ್ಸ್ ನಲ್ಲಿ ಜೂನ್ 9 ರಂದು ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಭಾರೀ ಸದ್ದು ಮಾಡುತ್ತಿದೆ. ಬಾಲಕಿಯರ ಫಿಲಡೆಲ್ಫಿಯಾ ಹೈಸ್ಕೂಲ್ನಿಂದ ಪದವಿ ಪಡೆದ 17 ವರ್ಷದ ಬಾಲಕಿ ಅಬ್ದುರ್-ರಹಮಾನ್ ಪ್ರಮಾಣಪತ್ರ ಪ್ರಸ್ತುತಿಯ ಸಮಯದಲ್ಲಿ ತನ್ನ ಹೆಸರನ್ನು ಕರೆದಾಗ ಸಂತೋಷದಿಂದ ಒಂದೆರೆಡು ಸ್ಟಪ್ ಹಾಕಿದ್ದಾಳೆ. ಹಾಗಾಗಿ ಪ್ರಾಂಶುಪಾಲರು ಆಕೆಗೆ ಪ್ರಮಾಣಪತ್ರವನ್ನೇ ನೀಡಲು ನಿರಾಕರಿಸಿದ್ದಾರೆ.
ಪ್ರಾಂಶುಪಾಲರು ಬಾಲಕಿಗೆ ಸರ್ಟಿಫಿಕೇಟ್ ನೀಡದೆ ಮತ್ತೆ ಸೀಟಿಗೆ ಹೋಗುವಂತೆ ಹೇಳಿರುವ ವೀಡಿಯೋ ನೋಡಿದ ನೆಟ್ಟಿಗರು ಹೆಣ್ಣುಮಕ್ಕಳಿಗೆ ನಿಯಮ ಮೀರಿ ವರ್ತಿಸದಂತೆ ಬಲವಂತ ಮಾಡುವುದು ಅನ್ಯಾಯ ಎಂದಿದ್ದಾರೆ.