ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್ ಸಂಬಂಧದ ಜೊತೆ ಅಮೆರಿಕ ಮಹತ್ವದ ಮೇಲುಗೈ ಸಾಧಿಸಿದೆ. ಇರಾನ್ ಜೊತೆ ಪರಾಮಾಣ ಮಾತುಕತೆ ಇಂದಿನಿಂದ ಆರಂಭಗೊಳ್ಳುತ್ತಿದ್ದು, ಈ ಪರಮಾಣು ಒಪ್ಪಂದ ಒಮನ್‌ನಲ್ಲಿ ನಡೆಯಲಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಡೊನಾಲ್ಡ್ ಟ್ರಂಪ್ ವೈಟ್ ಹೌಸ್‌ನಲ್ಲಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದರು. ಬಳಿಕ ಓವಲ್ ಕಚೇರಿಯಲ್ಲಿ ನೆತನ್ಯಾಹು ಜೊತೆಗಿನ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ‘ನಾವು ಇರಾನ್ ಜೊತೆ ಶೀಘ್ರದಲ್ಲೇ ಮಾತುಕತೆ ನಡೆಸಲಿದ್ದೇವೆ ಎಂದು ಹೇಳಿದ್ದರು.
ವಾಸ್ತವವಾಗಿ, ಟ್ರಂಪ್ ಪರಮಾಣು ಮಾತುಕತೆಯ ಮೇಲೆ ಹೇರಲಾದ ನಿರ್ಬಂಧಗಳನ್ನು ಬಿಗಿಗೊಳಿಸಿದ್ದಾರೆ. ಇದರೊಂದಿಗೆ ಇರಾನ್‌ನ ಪರಮಾಣು ಸೌಲಭ್ಯಗಳ ಮೇಲೆ ಅಮೆರಿಕಾ ಅಥವಾ ಇಸ್ರೇಲ್ ದಾಳಿ ಮಾಡುವ ಎಚ್ಚರಿಕೆಯನ್ನೂ ನೀಡಲಾಗಿದೆ.