ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಪಾನ್ ಕರಾವಳಿ ತೀರದಲ್ಲಿ ಅಮೆರಿಕದ ಒಸ್ಪ್ರೆ ಮಿಲಿಟರಿ ವಿಮಾನವೊಂದು ಪತನವಾಗಿದ್ದು, ಅದರಲ್ಲಿದ್ದ ಎಂಟು ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ.
ಮಧ್ಯಾಹ್ನ ಎರಡು ಗಂಟೆಗೆ ಯಕುಶಿಮಾ ದ್ವೀಪದಲ್ಲಿ ವಿಮಾನ ಪತನಗೊಂಡಿದೆ. ಎಡಭಾಗದ ಇಂಜಿನ್ನಲ್ಲಿ ಬೆಂಕಿ ಕಾಣಿಸಿದ್ದು, ಸಮುದ್ರಕ್ಕೆ ವಿಮಾನ ಬಂದು ಅಪ್ಪಳಿಸಿದೆ. ವಿಮಾನ ಪತನಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.