March 22, 2026
Sunday, March 22, 2026
spot_img

ಇರಾನ್ ಕಡೆಗೆ ಅಮೆರಿಕ ಮಿಲಿಟರಿ ವಿಮಾನ: ತಮ್ಮ ನಾಗರಿಕರಿಗೆ ಮರಳಿ ಬರುವಂತೆ ಸ್ವೀಡನ್, ಸೆರ್ಬಿಯಾ ಕರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್‌ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದು, ಇದರ ಬೆನ್ನಲ್ಲೇ ತಮ್ಮ ದೇಶದ ಪ್ರಜೆಗಳಿಗೆ ಇರಾನ್ ಬಿಟ್ಟು ಹೊರಡುವಂತೆ ಸೆರ್ಬಿಯಾ ಹಾಗೂ ಸ್ವೀಡನ್ ದೇಶಗಳು ಸೂಚಿಸಿವೆ.

ಇರಾನ್‌ನೊಂದಿಗಿನ ಸಂಭಾವ್ಯ ಅಣುಶಕ್ತಿ ಒಪ್ಪಂದದ ಮಾತುಕತೆ ದುರ್ಬಲವಾಗಿರುವಂತೆಯೇ ಯಾವಾಗ ಬೇಕಾದರೂ ಯುದ್ಧ ಆರಂಭವಾಗುವ ಸಾಧ್ಯತೆಯಿದ್ದು, ಅಮೆರಿಕ, ಮಧ್ಯಪ್ರಾಚ್ಯದ ಕಡೆಗೆ ಮಿಲಿಟರಿ ವಿಮಾನಗಳ ಹಾರಾಟವನ್ನು ಗಣನೀಯವಾಗಿ ಹೆಚ್ಚಿಸಿದೆ.

ಇದರಿಂದ ಎಚ್ಚೆತ್ತ ಸೆರ್ಬಿಯಾ ದೇಶವು , ತನ್ನ ನಾಗರಿಕರು ಮುಂಬರುವ ಅವಧಿಯಲ್ಲಿ ಇರಾನ್‌ಗೆ ಪ್ರಯಾಣಿಸಲು ಶಿಫಾರಸು ಮಾಡುವುದಿಲ್ಲ ಎಂದು ವಿದೇಶಾಂಗ ಸಚಿವಾಲಯವು ತನ್ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಮತ್ತೊಂದೆಡೆ ಸ್ವೀಡನ್‌ನ ವಿದೇಶಾಂಗ ಸಚಿವೆ ಮಾರಿಯಾ ಮಾಲ್ಮರ್ ಸ್ಟೆನರ್‌ಗಾರ್ಡ್ ಅವರು ಕೂಡ ಇರಾನ್‌ನಲ್ಲಿರುವ ಸ್ವೀಡಿಷ್ ನಾಗರಿಕರು ಕೂಡಲೇ ದೇಶ ತೊರೆಯುವಂತೆ ಮನವಿ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !