ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಿ20 ಶೃಂಗಸಭೆಗೆ ಇನ್ನೇನು ಎರಡು ದಿನವಷ್ಟೇ ಬಾಕಿಯಿದ್ದು, ಇಂದು ಅಮೆರಿಕ ಅಧ್ಯಕ್ ಜೋ ಬಿಡೆನ್ ಭಾರತಕ್ಕೆ ಬರಲಿದ್ದಾರೆ.
ಜಿ20 ನಾಯಕರು ಸೆ.9ರಂದು ಆಗಮಿಸಲಿದ್ದು, ಅಮೆರಿಕ ಅಧ್ಯಕ್ಷರು ಎರಡು ದಿನ ಮುಂಚಿತವಾಗಿಯೇ ಭಾರತಕ್ಕೆ ಆಗಮಿಸುತ್ತಿದ್ದಾರೆ.
ಪ್ರಧಾನಿ ಮೋದಿ ಜಕಾರ್ತದಲ್ಲಿ ನಡೆಯಲಿರುವ ಆಸಿಯಾನ್ ಭಾರರ ಮತ್ತು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗಿಯಾಗಿ ಇಂದು ಸಂಹೆ ದೆಹಲಿಗೆ ವಾಪಾಸಾಗಲಿದ್ದಾರೆ. ಇಂದು ಸಂಜೆ ಅಮೆರಿಕ ಅಧ್ಯಕ್ಷರೂ ಆಗಮಿಸಲಿದ್ದು, ನಾಳೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.
ಶೃಂಗಸಭೆಗೆ ಸೆ.8 ರ ಸಂಜೆಯೊಳಗೆ ಎಲ್ಲ ನಾಯಕರು ದೆಹಲಿಗೆ ಆಗಮಿಸಲಿದ್ದಾರೆ. ಭಾರತ ಮಂಟಪದಲ್ಲಿ ಸೆ.9ರಂದು ಮುಖ್ಯ ಶೃಂಗಸಭೆ ನಡೆಯಲಿದೆ. ಇಲ್ಲಿ ಆರ್ಥಿಕತೆ, ಆಹಾರ ಭದ್ರತೆ ಹಾಗೂ ಹವಾಮಾನ ಬದಲಾವಣೆ ಕುರಿತು ಚರ್ಚೆಗಳಾಗಲಿವೆ.
ಸೆ.9ರಂದು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತ ಮಂಟಪದಲ್ಲಿ ಎಲ್ಲಾ ನಾಯಕರು ಹಾಗೂ ಗಣ್ಯರಿಗೆ ಭೋಜನ ಕೂಟ ಆಯೋಜಿಸಿದ್ದಾರೆ.